ಮೋದಿ ತಾಯಿ ಆಶೀರ್ವಾದ ಪಡೆದ ರಾಷ್ಟ್ರಪತಿ ರಾಮನಾಥ್ ಕೋವಿಂದ್

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇವತ್ತು ಪ್ರಧಾನಿ ಮೋದಿಯವರ ತಾಯಿ ಹೀರಾಬೆನ್ ಭೇಟಿಯಾಗಿದ್ದಾರೆ. ಗುಜರಾತ್ ಪ್ರವಾಸದಲ್ಲಿರುವ ರಾಮನಾಥ್ ಕೋವಿಂದ್ 2ನೇ ದಿನವಾದ ಇಂದು ಗಾಂಧಿನಗರದ ಮನೆಯಲ್ಲಿ ಹೀರಾಬೆನ್ ಭೇಟಿಯಾಗಿ ಆಶೀರ್ವಾದ ಪಡೆದ್ರು. ಈ ವೇಳೆ ಕೋವಿಂದ್ ಪತ್ನಿ ಸವಿತಾ ಕೋವಿಂದ್ ಕೂಡ ಜೊತೆಗಿದ್ದರು. ಅರ್ಧ ಗಂಟೆವರೆಗೆ ಅಲ್ಲೇ ಇದ್ದು ಮೋದಿಯವರ ತಾಯಿಯ ಆರೋಗ್ಯ ವಿಚಾರಿಸಿದ್ದಾರೆ.

ನಂತರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಸವಿತಾ ಕೋವಿಂದ್ ಕೋಬಾ ಬಳಿ ಇರುವ ಮಹಾವೀರ ಜೈನ್ ಆರಾಧನಾ ಕೇಂದ್ರಕ್ಕೆ ಭೇಟಿ ನೀಡಿದ್ರು. ಇದಕ್ಕೂ ಮುನ್ನ ಮುಖ್ಯಮಂತ್ರಿ ವಿಜಯ್ ರೂಪಾನಿ, ರಾಮನಾಥ್ ಕೋವಿಂದ್ ಅವರಿಗೆ ಸ್ವಾಗತ ಕೋರಿದ್ರು.

Contact Us for Advertisement

Leave a Reply