ರಾಷ್ಟ್ರಪತಿ ಚುನಾವಣೆ: ಶೇ 99ರಷ್ಟು ಮತದಾನ, ಇಲ್ಲಿದೆ ನೋಡಿ ಸಂಪೂರ್ಣ ವರದಿ!

masthmagaa.com:

ದೇಶದ ಅತ್ಯಂತ ಮಹತ್ವದ ಭಾರತದ 15ನೇ ರಾಷ್ಟ್ರಪತಿ ಆಯ್ಕೆಗಾಗಿ ನಡೆದ ಚುನಾವಣೆಗೆ ಇಂದು ಮತದಾನವಾಗಿದೆ. ಬಿಜೆಪಿ ನೇತೃತ್ವದ NDA ಮೈತ್ರಿಕೂಟದ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಹಾಗೂ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಯಶ್ವಂತ್‌ ಸಿನ್ಹಾ ಕಣಕಿಳಿದಿದ್ರು. ಇನ್ನು ಸಂಸತ್ತಿನ ಎರಡು ಸದನಗಳಾದ ರಾಜ್ಯಸಭೆ, ಲೋಕಸಭೆ, ಎಲ್ಲ ರಾಜ್ಯಗಳ ವಿಧಾನಸಭೆ, ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ದೆಹಲಿ, ಪಾಂಡಿಚೇರಿ ಹಾಗೂ ಜಮ್ಮುಕಾಶ್ಮೀರ ಪ್ರತಿನಿಧಿಗಳು ಮತದಾನದಲ್ಲಿ ಭಾಗವಹಿಸಿದ್ರು. ಒಟ್ಟು ಮತಗಳ ಮೌಲ್ಯ 10,86,431 ಆಗಿದ್ದು, ಅಭ್ಯರ್ಥಿ ಗೆಲ್ಲಬೇಕು ಅಂದ್ರೆ ಶೇ50ಕ್ಕಿಂತ ಅಧಿಕ ಮತ ಅಗತ್ಯವಾಗಿದೆ. ಜುಲೈ 21 ರಂದು ಮತ ಎಣಿಕೆ ನಡೆಯಲಿದ್ದು, ಜುಲೈ 25 ರಂದು ಹೊಸ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹಾಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಅಧಿಕಾರಾವಧಿ ಜುಲೈ 24 ರಂದು ಕೊನೆಗೊಳ್ಳಲಿದೆ.

ಪ್ರಧಾನಿ ಮೋದಿ, ಕಾಂಗ್ರೆಸ್‌ ನಾಯಕಿ ಸೋನಿಯಾಗಾಂಧಿ ಸೇರಿದಂತೆ ಆಡಳಿತ, ಪ್ರತಿಪಕ್ಷಗಳದ ಎಲ್ಲ ಘಟಾನುಘಟಿಗಳು ತಮ್ಮ ಹಕ್ಕು ಚಲಾಯಿಸಿದ್ದಾರೆ.ಯಾವುದೇ ಪಕ್ಷಗಳು ವಿಪ್‌ ಜಾರಿ ಮಾಡೋಕೆ ಅವಕಾಶ ಇಲ್ದೇ ಇರೋದ್ರಿಂದ ರಾಷ್ಟ್ರಪತಿ ಚುನಾವಣೆ ಕುತೂಹಲಕ್ಕೂ ಕಾರಣವಾಗಿತ್ತು.ಇನ್ನು ಚುನಾವಣೆಗೂ ಮುನ್ನ ಮಾತನಾಡಿದ ಪ್ರತಿಪಕ್ಷ ಅಭ್ಯರ್ಥಿ ಯಶ್ವಂತ್‌ಸಿನ್ಹಾ ಇದು ಅತ್ಯಂತ ಮಹತ್ವದ ಚುನಾವಣೆ. ದೇಶದ ದಿಕ್ಕು ಬದಲಿಸುವ ಚುನಾವಣೆ, ಪ್ರಜಾಪ್ರಭುತ್ವ ಉಳಿಯುತ್ತದೆಯೋ ಇಲ್ವೋ ಅನ್ನೋದಕ್ಕೆ ನೀವು ಆತ್ಮಸಾಕ್ಷಿಗೆ ಅನುಗುಣವಾಗಿ ಮತಹಾಕಿ ಅಂತ ಮನವಿ ಮಾಡಿದ್ರು. ಇನ್ನು ಪ್ರೆಸಿಡೆಂಟ್‌ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಬೆಂಬಲಿಸುವಂತೆ ಅಕಾಲಿ ದಳ ತನ್ನ ಸದಸ್ಯರಿಗೆ ಸೂಚಿಸಿತ್ತು. ಆದರೆ ಪಕ್ಷದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ ಅಕಾಲಿದಳ ಶಾಸಕ ಮನ್‌ಪ್ರೀತ್‌ ಸಿಂಗ್‌ ಆಯಲಿ ಚುನಾವಣೆಯನ್ನೇ ಬಹಿಷ್ಕರಿಸಿದ್ದು, ನಾನು ದ್ರೌಪದಿ ಮುರ್ಮು ಹಾಗೂ ಯಶವಂತ್‌ ಸಿನ್ಹಾ ಇಬ್ಬರಿಗೂ ವೋಟು ಹಾಕೋದಿಲ್ಲ ಅಂತ ದೂರಉಳಿದ್ರು. ಇನ್ನು ಒಡಿಶಾದ ಕಾಂಗ್ರೆಸ್‌ ಶಾಸಕರೊಬ್ಬರು ಕ್ರಾಸ್‌ ವೋಟ್‌ ಮಾಡಿದ್ದು ಎನ್‌ಡಿಎ ಅಭ್ಯರ್ಥಿಗೆ ಮುರ್ಮುಗೆ ಮತಚಲಾಯಿಸಿದ್ದಾರೆ. ನನ್ನ ಮನಸಿನ ಮಾತು ಕೇಳಿ ಮತ ಹಾಕಿದ್ದಾನೆ ಅಂತ ಹೇಳಿದ್ದಾರೆ. ಇನ್ನು TMC ಸದಸ್ಯರು ಕೂಡ ಕ್ರಾಸ್‌ ವೋಟ್‌ ಮಾಡಿ ಬಿಜೆಪಿ ಅಭ್ಯರ್ಥಿಗೆ ಮತಹಾಕಿದ್ದಾರೆ ಅಂತ ಹೇಳಲಾಗಿದೆ. ಇನ್ನು ಅನಾರೋಗ್ಯ ಕಾರಣ ಕೇರಳದಲ್ಲಿ ಚಿಕಿತ್ಸೆ ಪಡೆಯುತ್ತಿರೋ ಉತ್ತರ ಪ್ರದೇಶದ ಬಿಜೆಪಿ ಶಾಸಕರೊಬ್ಬರು ಕೇರಳದಿಂದಲೇ ಮತಚಲಾಯಿಸಿದ್ದಾರೆ.

ಇನ್ನು ರಾಜ್ಯದಲ್ಲೂ ಕೂಡ ರಾಷ್ಟ್ರಪತಿ ಚುನಾವಣೆಗೆ ಮತದಾನ ಮಾಡಲಾಗಿದೆ.
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ವ್ಹೀಲ್‌ಚೇರ್‌ನಲ್ಲಿ ಬಂದು ತಮ್ಮ ಹಕ್ಕುಚಲಾಯಿಸಿದ್ದಾರೆ. ಇನ್ನು ಸಿಎಂ ಬಸವರಾಜ ಬೊಮ್ಮಯಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಸಂಸದರು ಶಾಸಕರು ಸೇರಿದಂತೆ ಎಲ್ಲರೂ ಮತದಾನದಲ್ಲಿ ಭಾಗವಹಿಸಿದ್ದಾರೆ.

-masthmagaa.com

Contact Us for Advertisement

Leave a Reply