ಸನ್ನಿ ಲಿಯೋನ್ ಆಲ್ಬಂ ಬ್ಯಾನ್ ಮಾಡಿ: ಮಥುರಾ ಅರ್ಚಕರ ಆಗ್ರಹ

masthmagaa.com:

ಬಾಲಿವುಡ್ ಮಾದಕ ಬೆಡಗಿ ಸನ್ನಿ ಲಿಯೋನ್​ ಹೊಸ ಆಲ್ಪಂಗೆ ಕೃಷ್ಣ ಜನ್ಮಸ್ಥಾನ ಮಥುರಾದ ಅರ್ಚಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಆಲ್ಪಂನಲ್ಲಿ ಮಧುಬಾನ್​​​ ಮೇ ರಾಧಿಕಾ ನಾಚೆ ಅನ್ನೋ ಸಾಂಪ್ರದಾಯಿಕ ಹಾಡಿಗೆ ಅಶ್ಲೀಲವಾಗಿ ನೃತ್ಯ ಮಾಡಲಾಗಿದೆ ಅಂತ ಆರೋಪಿಸಿದ್ದಾರೆ. ಈ ಹಿಂದೆ 1960ರ ಕೊಹಿನೂರ್ ಸಿನಿಮಾದ ಹಾಡು ಇದಾಗಿದ್ದು, ಅಲ್ಲಿ ಮೊಹಮ್ಮದ್ ರಫಿ ಅನ್ನೋರು ಇದನ್ನ ಹಾಡಿದ್ರು. ಆದ್ರೆ ಈಗ ಅದಕ್ಕೆ ಅಶ್ಲೀಲವಾಗಿ ಡ್ಯಾನ್ಸ್ ಮಾಡಲಾಗಿದ್ದು, ಅದನ್ನು ಬ್ಯಾನ್ ಮಾಡದೇ ಇದ್ರೆ ಕೋರ್ಟ್​​​ ಮೊರೆ ಹೋಗ್ತೀವಿ ಅಂತ ಅರ್ಚಕರು ಎಚ್ಚರಿಸಿದ್ದಾರೆ. ಜೊತೆಗೆ ಸನ್ನಿ ಲಿಯೋನ್, ಕ್ಷಮೆಯಾಚಿಸದೇ ಇದ್ರೆ ಭಾರತದಲ್ಲಿ ಇರೋದಕ್ಕೆ ಬಿಡೋದಿಲ್ಲ ಅಂತ ವಾರ್ನಿಂಗ್ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply