ಸುಪ್ರೀಂಕೋರ್ಟ್​ ಕೊಲಿಜಿಯಂ ಶಿಫಾರಸ್ಸಿಗೆ ಕೇಂದ್ರ, ರಾಷ್ಟ್ರಪತಿಗಳು ಅಸ್ತು

masthmagaa.com:

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇಮಕಕ್ಕೆ​ ಕೊಲಾಜಿಯಂ ಶಿಫಾರಸು ಮಾಡಿದ್ದ 9 ಮಂದಿಯ ಹೆಸರಿಗೆ ಕೇಂದ್ರ ಸರ್ಕಾರ ಮತ್ತು ರಾಷ್ಟ್ರಪತಿಗಳು ಅಸ್ತು ಎಂದಿದ್ದಾರೆ. ಆಗಸ್ಟ್ 31ರಂದು ಇವರೆಲ್ಲಾ ಪ್ರಮಾಣ ವಚನ ಸ್ವೀಕರಿಸೋ ಸಾಧ್ಯತೆ ಇದೆ. ಈ 9 ಮಂದಿಯಲ್ಲಿ ಮೂವರು ಮಹಿಳೆಯರು ಕೂಡ ಇದ್ದಾರೆ. ಅದ್ರಲ್ಲೂ ಕರ್ನಾಟಕ ಹೈಕೋರ್ಟ್​​ನ ಜಡ್ಜ್ ಆಗಿರೋ ಬಿವಿ ನಾಗರತ್ನ 2027ರಲ್ಲಿ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ, ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿರೋ ಇತಿಹಾಸ ಸೃಷ್ಟಿಸೋ ಸಾಧ್ಯತೆ ಇದೆ.

-masthmagaa.com

Contact Us for Advertisement

Leave a Reply