ಸುಳ್ಳು ಸುದ್ದಿ ನಿಯಂತ್ರಣಕ್ಕೆ ಸರ್ಕಾರದ ಮಹತ್ವದ ನಿರ್ಧಾರ! ಶೀಘ್ರದಲ್ಲೇ ಫ್ಯಾಕ್ಟ್ ಚೆಕ್ ಸಮಿತಿ ಆರಂಭ!

masthmagaa.com:

ಸುಳ್ಳು ಸುದ್ದಿ ಹರಡೋದನ್ನ ನಿಯಂತ್ರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಫ್ಯಾಕ್ಟ್ ಚೆಕ್ ಸಮಿತಿಯನ್ನ ಶೀಘ್ರದಲ್ಲಿ ಆರಂಭಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಆದರೆ ಈ ಪ್ರಕ್ರಿಯೆ ಮೂಲಕ ಮಾಧ್ಯಮಗಳನ್ನ ಕಂಟ್ರೋಲ್‌ನಲ್ಲಿ ಇಡಲ್ಲ. ಈ ಬಗ್ಗೆ ಯಾರಿಗೂ ಆತಂಕ ಬೇಡ ಅಂತ ಸ್ಪಷ್ಟಪಡಿಸಿದೆ. ಈ ಬಗ್ಗೆ ಐಟಿ ಬಿಟಿ‌ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದು, ಸರ್ಕಾರದ ನಡೆಯ ಬಗ್ಗೆ ಯಾರಲ್ಲೂ ಆತಂಕ‌ ಬೇಡ. ನಾವು ರಾಜಕೀಯ ದ್ವೇಷ ಸಾಧಿಸಲು ಹೊರಟಿಲ್ಲ. ಮಾಧ್ಯಮಗಳನ್ನು ನಿಯಂತ್ರಣ ಮಾಡಲೂ ಹೊರಟಿಲ್ಲ ಎಂದಿದ್ದಾರೆ. ಇನ್ನು ಫ್ಯಾಕ್ಟ್‌ ಚೆಕ್‌ ಸಮಿತಿ ಸುದ್ದಿಗಳ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ನಡೆಸಿ, ಸುದ್ದಿಯ ಮೂಲವನ್ನ ಪತ್ತೆ ಮಾಡಲಿದೆ. ಹಾಗೂ ವಿಶ್ಲೇಷಣಾ ತಂಡ ಸುಳ್ಳು ಮಾಹಿತಿಯ ಸೃಷ್ಟಿಯ ಬಗ್ಗೆ ಹಾಗೂ ಇದರ ಪರಿಣಾಮದ ಬಗ್ಗೆ ನಿಗಾ ಇಡಲಿದೆ ಎನ್ನಲಾಗಿದೆ. ಇನ್ನು ಸಾರ್ವಜನಿಕರು ಸುಳ್ಳು ಸುದ್ದಿಯ ಬಗ್ಗೆ ದೂರು ನೀಡಿದಾಗ, ಫ್ಯಾಕ್ಟ್ ಚೆಕ್ ಏಜೆನ್ಸಿಗಳು ಸುಳ್ಳು ಸುದ್ದಿಯ ಬಗ್ಗೆ ಪರಿಶೀಲನೆ ನಡೆಸಲಿದೆ. ಬಳಿಕ ಸುಳ್ಳು ಸುದ್ದಿಯ ವಿರುದ್ಧ ಕಾನೂನು ಕ್ರಮದ ಅಗತ್ಯವಿದ್ದರೆ ಪೊಲೀಸ್ ದೂರು ದಾಖಲಿಸಲಾಗುತ್ತೆ. ಹಾಗೂ ಸತ್ಯವನ್ನ ಬಹಿರಂಗಗೊಳಿಸಲಾಗುತ್ತೆ ಅಂತ ಹೇಳಲಾಗಿದೆ. ಇನ್ನು ಇದಕ್ಕೆ ಮಾಜಿ ಪೊಲೀಸ್‌ ಅಧಿಕಾರಿ, ಬಿಜೆಪಿ ನಾಯಕ ಭಾಸ್ಕರ್‌ ರಾವ್‌ ಪ್ರತಿಕ್ರಿಯಿಸಿದ್ದಾರೆ. ಫ್ಯಾಕ್ಟ್‌ ಚೆಕ್‌ ಹೆಸರಿನಲ್ಲಿ ಮಾಧ್ಯಮಗಳಿಗೆ ಮೂಗು ದಾರ ಹಾಕಲು ಹೊರಟಿರುವ ಪ್ರಯಾಂಕ್‌ ಖರ್ಗೆ, ಗೃಹ ಸಚಿವರ ಸ್ಥಾನವನ್ನ ಹೈಜಾಕ್‌ ಮಾಡಿದ್ದಾರೆ. ಹೀಗಾಗಿ ಗೃಹ ಸಚಿವರು ಯಾರು ಅನ್ನೊ ಗೊಂದಲ ಸೃಷ್ಠಿಯಾಗಿದೆ ಅಂತ ವ್ಯಂಗ್ಯವಾಡಿದ್ದಾರೆ.

-masthmagaa.com

Contact Us for Advertisement

Leave a Reply