ವಿದೇಶಗಳಲ್ಲೂ ಪ್ರಭಾವ ವಿಸ್ತರಿಸಿಕೊಳ್ಳಲು ಚೀನಾ ಕ್ಯಾಂಪೇನ್!

masthmagaa.com:

ಚೀನಾ ವಿದೇಶಗಳಲ್ಲೂ ತನ್ನ ಪ್ರಭಾವ ವಿಸ್ತರಿಸಿಕೊಳ್ಳೋಕೆ ಸೋಷಿಯಲ್ ಮಿಡಿಯಾ ಕ್ಯಾಂಪೇನ್ ಶುರು ಮಾಡಿದೆ. ವಿಶ್ವಾದ್ಯಂತ ನೂರಾರು ದೇಶ – ಭಾಷೆಗಳಲ್ಲಿ ಚೀನಾ ಪರ ವಿಚಾರಗಳನ್ನ ಹರಡಲು ವೆಬ್ಸೈಟ್ ಹಾಗೂ ಸೊಷಿಯಲ್ ಮೀಡಿಯಾ ಅಕೌಂಟ್ಗಳನ್ನ ಕ್ರಿಯೇಟ್ ಮಾಡಲಾಗಿದೆ. ಯಾವಮಟ್ಟಿಗೆ ಅಂದ್ರೆ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಲ್ಲಿ ಚೀನಾ ಪರವಾಗಿ ಪ್ರತಿಭಟನೆಗೆ ಜನ ಸೇರಿಸುವಷ್ಟು ಪ್ರಬಲವಾಗಿ ಈ ನೆಟ್ ವರ್ಕ್ ಮಾಡಿಕೊಂಡಿದೆ ಚೀನಾ ಅಂತ ಗೂಗಲ್ ಹಾಗೂ ಫೈರ್ ಐ ಕಂಪನಿಗಳ ಸೆಕ್ಯೂರಿಟಿ ಎಕ್ಸ್ಪರ್ಟ್ ಗಳು ಹೇಳಿದ್ದಾರೆ. ಕೊರೋನ ಮೂಲದ ವಿಚಾರದಲ್ಲೂ ಅಷ್ಟೆ. ಇಡೀ ಜಗತ್ತು ಚೀನಾವನ್ನ ದೂರುತ್ತಿದ್ದಾಗ, ಕೊರೋನ ಹುಟ್ಟಿಗೆ ಅಮೆರಿಕವೇ ಕಾರಣ ಅಂತ ಹೊಸ ಪ್ರಚಾರ ಶುರು ಮಾಡುವಲ್ಲಿ ಚೀನಾದ ಈ ನೆಟ್ವರ್ಕೇ ಪ್ರಮುಖ ಪಾತ್ರ ವಹಿಸಿತ್ತು ಅಂತ ಕೂಡ ಆರೋಪ ಮಾಡಲಾಗಿದೆ.

-masthmagaa.com

Contact Us for Advertisement

Leave a Reply