ಡೊನಾಲ್ಡ್​ ಟ್ರಂಪ್​ ಅವರ ಆ್ಯಪ್​ ಲಾಂಚ್​ ಆದ ದಿನವೇ ಹ್ಯಾಕ್

masthmagaa.com:

ಈ ಡೊನಾಲ್ಡ್ ಟ್ರಂಪ್​ಗೂ ಸೋಷಿಯಲ್ ಮೀಡಿಯಾಗೂ ಆಗಿ ಬರಲ್ಲ ಅನ್ಸುತ್ತೆ. ಯಾಕಂದ್ರೆ ಅವರ ಸೋಷಿಯಲ್ ಮೀಡಿಯಾ ವೇದಿಕೆ ಲಾಂಚ್ ಆದ ದಿನವೇ ಹ್ಯಾಕ್ ಆಗಿದೆ. ಅವರ ಹಿರಿಯ ಸಲಹೆಗಾರ ಜೇಸನ್ ಮಿಲ್ಲರ್ ಅನ್ನೋರು ನಿನ್ನೆಯಷ್ಟೇ ಗೆಟರ್ ಅನ್ನೋ ಒಂದು ಸೋಷಿಯಲ್ ಮೀಡಿಯಾ ವೇದಿಕೆ ಲಾಂಚ್ ಮಾಡಿದ್ರು. ಟ್ವಿಟರ್ ಮಾದರಿಯ ಈ ಆ್ಯಪ್​ ಗೂಗಲ್ ಮತ್ತು ಆಪಲ್ ಆ್ಯಪ್​ ಸ್ಟೋರ್​​ಗಳಲ್ಲಿ ಲಭ್ಯವಿತ್ತು. ಇದಕ್ಕೆ ಸುಮಾರು 5 ಲಕ್ಷದಷ್ಟು ಜನ ರಿಜಿಸ್ಟರ್ ಕೂಡ ಆಗಿದ್ರು. ಆದ್ರೆ ಅಷ್ಟರಲ್ಲಿ ಗೆಟರ್ ಹ್ಯಾಕ್ ಆಗಿದ್ದು, ಬಳಕೆದಾರರಿಗೆ ಜೂಬಾ ಬಗ್ದಾದ್ ವಾಸ್ ಹಿಯರ್​.. ಫಾಲೋ ಮಿ ಆನ್ ಟ್ವಿಟ್ಟರ್ ಅಂತ ಬರ್ತಾ ಇದೆ. ಟ್ರಂಪ್ ಆಪ್ತರಾದ ಮಾಜಿ ಸೆಕ್ರೆಟರಿ ಆಫ್ ಸ್ಟೇಟ್ ಮೈಕ್ ಪೊಂಪಿಯೋ, ಗೆಟರ್ ಲಾಂಚ್ ಮಾಡಿದ ಜೇಸನ್ ಮಿಲ್ಲರ್​ ಖಾತೆಗಳಲ್ಲೂ ಕೂಡ ಇದೇ ರೀತಿ ಬರೆಯಲಾಗಿದೆ. ಅಂದಹಾಗೆ ಈ ಜುಬಾ ಯಾರು ಅಂತ ನೋಡೋದಾದ್ರೆ, ಈತ ಇರಾಕ್​​ನಲ್ಲಿ ಅಮೆರಿಕ ವಿರುದ್ಧ ಹೋರಾಡ್ತಿರೋ ಬಂಡುಕೋರರ ಗುಂಪಿನಲ್ಲಿ ತುಂಬಾ ಫೇಮಸ್.. ಹಲವು ಇರಾಕಿಗಳಿಗೆ ಈತ ಹೀರೋ ರೀತಿ.. ಈತ ಹಲವು ವಿಡಿಯೋಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ 2ನೇ ವಿಡಿಯೋದಲ್ಲಿ ಈತ 37ಕ್ಕೂ ಹೆಚ್ಚು ಅಮೆರಿಕನ್ ಯೋಧರನ್ನು ಹತ್ಯೆ ಮಾಡಿರೋದಾಗಿ ತೋರಿಸಲಾಗಿದೆ. ಈತನೇ ಈಗ ಟ್ರಂಪ್ ಹೊಸ ಆ್ಯಪ್​ ಗೆಟರ್ ಹ್ಯಾಕ್ ಮಾಡಿದ್ದಾ..? ಅಥವಾ ಈತನ ಹೆಸರು ಹಾಕ್ಕೊಂಡು ಬೇರೆ ಯಾರಾದ್ರೂ ಮಾಡಿದ್ದಾ ಅಂತ ಇನ್ನೂ ಗೊತ್ತಾಗಿಲ್ಲ. ಜೂನ್ 6ರಂದು ಟ್ರಂಪ್ ಬೆಂಬಲಿಗರು ಕ್ಯಾಪಿಟಲ್ ಹಿಲ್ ಕಟ್ಟಡದ ಮೇಲೆ ದಾಳಿ ನಡೆಸಿದ ಬಳಿಕ ಟ್ರಂಪ್​​ನ್ನು ಸೋಷಿಯಲ್ ಮೀಡಿಯಾ ಸಂಸ್ಥೆಗಳಾದ ಫೇಸ್​ಬುಕ್​, ಟ್ವಿಟರ್, ಇನ್​ಸ್ಟಾಗ್ರಾಂ ಬ್ಯಾನ್ ಮಾಡಿದ್ವು.

-masthmagaa.com

Contact Us for Advertisement

Leave a Reply