ಕಾಬೂಲ್​ನಲ್ಲಿ ತಾಲಿಬಾನ್, ಪಾಕ್ ವಿರೋಧಿ ಪ್ರತಿಭಟನೆ! ಫೈರಿಂಗ್​, ಗಲಾಟೆ

masthmagaa.com:

ಕಾಬೂಲ್​ನಲ್ಲಿಂದು ನೂರಾರು ಮಂದಿ ರಸ್ತೆಗಿಳಿದು ಪಾಕಿಸ್ತಾನದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಇದ್ರ ವಿಡಿಯೋವನ್ನು ಪತ್ರಕರ್ತರೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದ್ರಲ್ಲಿ ಪಾಕಿಸ್ತಾನ, ಐಎಸ್​ಐ, ತಾಲಿಬಾನ್ ಸಾಯಲಿ, ನಮಗೆ ಪಾಕಿಸ್ತಾನದ ಕೈಗೊಂಬೆ ಸರ್ಕಾರ ಬೇಡ, ಪಾಕಿಸ್ತಾನ.., ಅಫ್ಘಾನಿಸ್ತಾನ ಬಿಟ್ಟು ತೊಲಗು.. ಪಂಜ್​ಶೀರ್​​ಗೆ ನಮ್ಮ ಬೆಂಬಲ ಅಂತ ಘೋಷಣೆಗಳನ್ನು ಕೂಗಿದ್ದಾರೆ. ಪಾಕಿಸ್ತಾನ ರಾಯಭಾರಿ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಮಹಿಳೆಯರು ಐಸ್​ಐ ಹೊರಟು ಹೋಗು ಅನ್ನೋ ಪ್ಲೆಕಾರ್ಡ್​​ಗಳನ್ನು ಹಿಡಿದುಕೊಂಡಿದ್ದು ಕೂಡ ಕಂಡು ಬಂತು.. ಈ ವೇಳೆ ಮಧ್ಯಪ್ರವೇಶಿಸಿದ ತಾಲಿಬಾನಿಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಭಾರಿ ಪ್ರಮಾಣದ ಜನ ಸೇರಿದ್ದು, ಗುಂಡಿನ ಶಬ್ದ ಮೊಳಗುತ್ತಲೇ ಎಲ್ಲಾ ಚೆಲ್ಲಾಪಿಲ್ಲಿಯಾಗಿದ್ದಾರೆ. ಕೆಲವು ಮಹಿಳೆಯರಿಗೆ ತಾಲಿಬಾನಿಗಳು ಹಿಗ್ಗಾಮುಗ್ಗ ಥಳಿಸಿದ್ದಾರೆ. ಇನ್ನು ಪ್ರತಿಭಟನೆಯನ್ನು ಕವರ್ ಮಾಡ್ತಿದ್ದ ಟೋಲೋನ್ಯೂಸ್ ವರದಿಗಾರ ವಾಹೀದ್ ಅಹ್ಮದಿಯನ್ನು ಪೊಲೀಸರು ಅರೆಸ್ಟ್ ಮಾಡಿದಾರೆ. ಅಂದಹಾಗೆ ಪಾಕಿಸ್ತಾನದ ಐಎಸ್​ಐ ಅಪ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಲು ತಾಲಿಬಾನಿಗಳಿಗೆ ಸಹಾಯ ಮಾಡ್ತಿದೆ ಅನ್ನೋ ಆರೋಪ ಇದೆ.

-masthmagaa.com

Contact Us for Advertisement

Leave a Reply