ಬೈಡೆನ್ ಭಾಷಣಕ್ಕೆ ಅಡ್ಡಿ: ಗಾಜಾದಲ್ಲಿ ಸೀಜ್‌ ಫೈರ್‌ ತರುವಂತೆ ಆಗ್ರಹ

masthmagaa.com:

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಭಾಷಣ ಮಾಡ್ತಿರೋ ವೇಳೆ ಗಾಜಾ ಪರ ಘೋಷಣೆಗಳು ಕೇಳಿ ಬಂದಿವೆ. ಅಮೆರಿಕದ ಸೌತ್‌ ಕ್ಯಾರೊಲಿನದಲ್ಲಿ ಬೈಡೆನ್‌ ಭಾಷಣ ಮಾಡ್ತಿದ್ದ ವೇಳೆ. ಗಾಜಾದಲ್ಲಿ ಕೂಡಲೆ ಸೀಜ್‌ಫೈರ್‌ ತರ್ಬೇಕು, ʻಸೀಜ್‌ ಫೈರ್‌ ನೌʼ ಅಂತ ಜನ ಘೋಷಣೆ ಕೂಗಿದ್ದಾರೆ. ಈ ವೇಳೆ ಬೈಡೆನ್‌, ನಿಮ್ಮ ಕಾಳಜಿ ನಮಗೆ ಅರ್ಥ ಆಗತ್ತೆ, ಗಾಜಾದಲ್ಲಿ ಸಾವು ನೋವನ್ನ ಕಡಿಮೆ ಮಾಡೋ ಬಗ್ಗೆ ನಾವು ಕೆಲಸ ಮಾಡ್ತಿದ್ದೇವೆ ಅಂತ ಸಾಂತ್ವನ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply