masthmagaa.com:

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ದಕ್ಷಿಣ ಭಾರತದ ರಾಜ್ಯಗಳಿಗೆ ಭೇಟಿ ನೀಡಿದಾಗ ಅಥವಾ ಹಿಂದಿಯೇತರ ಭಾಷೆ ಮಾತನಾಡುವ ರಾಜ್ಯಗಳಿಗೆ ಭೇಟಿ ನೀಡಿದಾಗ ಅವರ ಭಾಷಣವನ್ನ ಟ್ರಾನ್ಸ್​ಲೇಟ್​ ಮಾಡೋಕೆ ಅಂತಾನೇ ಕೆಲವರು ಇರ್ತಾರೆ. ರಾಹುಲ್ ಗಾಂಧಿ ಹೇಳಿದ್ದನ್ನ ಜನರಿಗೆ ಸ್ಥಳೀಯ ಭಾಷೆಯಲ್ಲಿ ಹೇಳುವ ಕೆಲಸವನ್ನ ಈ ಟ್ರಾನ್ಸ್​ಲೇಟರ್​ಗಳು ಮಾಡ್ತಾರೆ. ಕೆಲವೊಂದುಸಲ ರಾಹುಲ್ ಗಾಂಧಿ ಹೇಳಿದ್ದು ಟ್ರಾನ್ಸ್​ಲೇಟರ್​ಗಳಿಗೆ ಅರ್ಥವಾಗದೆ ಪೇಚಿಗೆ ಸಿಲುಕಿರೋ ಘಟನೆ ಸಾಕಷ್ಟು ಬಾರಿ ನಡೆದಿದೆ. ನಿನ್ನೆ ಇಂಥಾದ್ದೇ ಒಂದು ಘಟನೆ ಪುದುಚೆರಿಯಲ್ಲಿ ನಡೆದಿದೆ. ರಾಹುಲ್ ಗಾಂಧಿ ಪುದುಚೆರಿಗೆ ಭೇಟಿ ನೀಡಿ ಮೀನುಗಾರರನ್ನ ಭೇಟಿಯಾಗಿದ್ರು. ಅವರ ಜೊತೆ ಮಾತನಾಡುವಾಗ ಪುದುಚೆರಿ ಸಿಎಂ ನಾರಾಯಣಸ್ವಾಮಿ ಅವರೇ ರಾಹುಲ್​ ಗಾಂಧಿಯ ಟ್ರಾನ್ಸ್​ಲೇಟರ್ ರೀತಿ ಕೆಲಸ ಮಾಡಿದ್ರು. ಈ ವೇಳೆ ಮೀನುಗಾರ ಮಹಿಳೆಯೊಬ್ಬಳು ಎದ್ದು ನಿಂತು, ಸಿಎಂ ನಾರಾಯಣಸ್ವಾಮಿ ಈಗೇನೋ ಇಲ್ಲಿದ್ದಾರೆ. ಆದ್ರೆ ನೀರವ್​ ಚಂಡಮಾರುತ ಅಪ್ಪಳಿಸಿದ ಸಂದರ್ಭದಲ್ಲಿ ಇಲ್ಲಿಗೆ ಬಂದಿದ್ರಾ? ಅಂತ ತಮಿಳಿನಲ್ಲಿ ಕೇಳಿದ್ರು. ಅಯ್ಯೋ.. ಇದು ನನ್ ಬುಡಕ್ಕೆ ಬಂತಲ್ಲಾ.. ಈಗ ರಾಹುಲ್​ ಗಾಂಧಿಗೆ ಏನ್​ ಹೇಳೋದು ಅಂತ ಚಡಪಡಿಸಿದ ಸಿಎಂ ನಾರಾಯಣಸ್ವಾಮಿ, ‘ನೀರವ್ ಚಂಡಮಾರುತ ವೇಳೆ ನಾನು ಇಲ್ಲಿಗೆ ಬಂದಿದ್ದೆ. ಜನರಿಗೆ ಪರಿಹಾರ ನೀಡಿದ್ದೆ ಅಂತ ಮಹಿಳೆ ಹೇಳ್ತಿದ್ದಾಳೆ’ ಅಂದುಬಿಟ್ರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಮಹಿಳೆ ನೋಡಿದ್ರೆ ಸಿಎಂ ನಾರಾಯಣಸ್ವಾಮಿ ವಿರುದ್ಧ ರಾಹುಲ್ ಗಾಂಧಿಗೆ ದೂರಿದ್ರೆ.. ಈ ನಾರಾಯಣಸ್ವಾಮಿ ಅದನ್ನೇ ಹೊಗಳಿಕೆ ರೀತಿಯಲ್ಲಿ ಬಿಂಬಿಸಿದ್ರು ಅಂತ ಸಾಕಷ್ಟು ಚರ್ಚೆ ನಡೀತಿದೆ.

https://twitter.com/Satyanewshi/status/1362021466015813644?ref_src=twsrc%5Etfw%7Ctwcamp%5Etweetembed%7Ctwterm%5E1362021466015813644%7Ctwgr%5E%7Ctwcon%5Es1_&ref_url=https%3A%2F%2Fwww.ndtv.com%2Findia-news%2Fwatch-lost-in-translation-puducherry-womans-complaint-to-rahul-gandhi-2372877

-masthmagaa.com

Contact Us for Advertisement

Leave a Reply