ಅಪ್ಪು ಕನಸಿನ ಪ್ರೊಜೆಕ್ಟ್ “ಗಂಧದಗುಡಿ” ಟೀಸರ್ ಗೆ ಅಭೂತಪೂರ್ವ ಪ್ರತಿಕ್ರಿಯೆ

masthmagaa.com:

ಪುನೀತ್ ರಾಜ್ ಕುಮಾರ್ ಅವರ ಕನಸಿನ ಪ್ರಾಜೆಕ್ಟ್ “ಗಂಧದ ಗುಡಿ” ಸಾಕ್ಷ್ಯಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದೆ. ಪಿಆರ್ ಕೆ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಈ ಟೀಸರ್ ಬಿಡುಗಡೆಯಾಗಿದ್ದು, ಟೀಸರ್ ಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇದಕ್ಕೂ ಮೊದಲು ನವೆಂಬರ್ 1 ಅಂದರೆ ರಾಜ್ಯೋತ್ಸವದ ದಿನದಂದು ಈ ಟೀಸರ್ ಬಿಡುಗಡೆ ಮಾಡೋದಕ್ಕೆ ಪುನೀತ್ ರಾಜ್ ಕುಮಾರ್ ನಿರ್ಧರಿಸಿದ್ದರು. ಅಪ್ಪು ಅವರ ಕೊನೆಯ ಸೋಶಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಈ
 ಟೀಸರ್ ನ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದರು. ಆದರೆ ಅಪ್ಪು ಅಕಾಲಿಕ ನಿಧನದ ಕಾರಣದಿಂದ ಟೀಸರ್ ಅವತ್ತು ಬಿಡುಗಡೆ ಆಗಿರಲಿಲ್ಲ. ಪಾರ್ವತಮ್ಮ ರಾಜ್ ಕುಮಾರ್ ಹುಟ್ಟಿದ ದಿನವಾದ ಇಂದು ಗಂಧದಗಡಿ ಟೀಸರ್ ನ್ನ ಬಿಡುಗಡೆ ಮಾಡಲಾಗಿದೆ.
ಕರ್ನಾಟಕದ ವಿವಿಧ ಅರಣ್ಯ ಪ್ರದೇಶಗಳು, ಜಲಪಾತಗಳ ದೃಶ್ಯಗಳು, ಮತ್ತು ಪಶ್ಚಿಮ ಘಟ್ಟದ ಜೀವವೈವಿಧ್ಯತೆಯನ್ನ ಇಲ್ಲಿ ಕಟ್ಟಿಕೊಡಲಾಗಿದ್ದು ಪ್ರತೀಕ್ ಶೆಟ್ಟಿ ಅವರ ಅದ್ಭುತ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಅದ್ಭುತವಾಗಿ ಮೂಡಿಬಂದಿದೆ.
‘ಗಂಧದ ಗುಡಿ’ ಸಾಕ್ಷ್ಯಚಿತ್ರವು 2022ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
-masthmagaa.com
Contact Us for Advertisement

Leave a Reply