ಪಂಜಾಬ್​ನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆ!

masthmagaa.com:

ಕಾಂಗ್ರೆಸ್ ಆಡಳಿತವಿರುವ ಪಂಜಾಬ್​ನಲ್ಲಿ ಪೆಟ್ರೋಲ್-ಡೀಸೆಲ್ ಮೇಲೆ ಹೆಚ್ಚುವರಿ ಡಿಸ್ಕೌಂಟ್ ನೀಡಲಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರದ ತೆರಿಗೆ ಕಡಿತದಿಂದಾಗಿ ಈಗಾಗಲೇ ಪೆಟ್ರೋಲ್-ಡೀಸೆಲ್ ದರ ಕಡಿಮೆಯಾಗಿದೆ. ಅದ್ರ ಬೆನ್ನಲ್ಲೇ ಹಲವು ರಾಜ್ಯಗಳು ಕೂಡ ತೈಲದರ ಇಳಿಸಿದ್ವು. ಆದ್ರೆ ಪಂಜಾಬ್​ನಲ್ಲಿ ರಾಜ್ಯಸರ್ಕಾರದ ಕಡೆಯಿಂದ ಬೆಲೆ ಇಳಿಸದ ಕಾರಣ ಪ್ರತಿಭಟನೆ ಕೂಡ ನಡೆದಿತ್ತು. ಇದ್ರ ಬೆನ್ನಲ್ಲೇ ಇವತ್ತು ಪೆಟ್ರೋಲ್​​​ ಪ್ರತಿ ಲೀಟರ್​​ಗೆ 10 ರೂಪಾಯಿ ಮತ್ತು ಡೀಸೆಲ್ ಪ್ರತಿ ಲೀಟರ್​​ಗೆ 5 ರೂಪಾಯಿ ಇಳಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಸಿಎಂ ಚರಣ್​​ಜಿತ್ ಸಿಂಗ್ ಚನ್ನಿ, ಸ್ವತಂತ್ರ ಭಾರತದ 70 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲು ಅಂತ ಹೇಳಿದ್ದಾರೆ. ಇದ್ರಿಂದ ಪಂಜಾಬ್​ನಲ್ಲಿ ಪ್ರತಿ ಲೀಟರ್ ಪೆಟ್ರೋಲ್​​ಗೆ 96 ರೂಪಾಯಿ ಮತ್ತು ಡೀಸೆಲ್​​ಗೆ 85 ರೂಪಾಯಿ ಆಗಿದೆ. ಅಂದಹಾಗೆ ಬೆಂಗಳೂರಲ್ಲಿ ಪೆಟ್ರೋಲ್ ಲೀಟರ್​​​ಗೆ 100 ರೂಪಾಯಿ ಇದ್ರೆ, ಡೀಸೆಲ್ 85 ರೂಪಾಯಿ ಇದೆ.

-masthmagaa.com

Contact Us for Advertisement

Leave a Reply