ಭಾರತದ ಸಂಭ್ರಮ ಸಹಿಸದ ಪಾಕ್..! ಕಳುಹಿಸಿತು ಡ್ರೋನ್..!

ಒಂದ್ಕಡೆ ದೇಶಾದ್ಯಂತ ವಾಯುಸೇನೆ ದಿನಾಚರಣೆ ಮತ್ತು ದಸರಾ ಹಬ್ಬವನ್ನು ಆಚರಿಸಲಾಗ್ತಿದೆ. ಆದ್ರೆ ಮತ್ತೊಂದ್ಕಡೆ ಪಾಕಿಸ್ತಾನ ತನ್ನ ದುಷ್ಟಬುದ್ಧಿಯನ್ನು ಮುಂದುವರಿಸಿದೆ. ಪಂಜಾಬ್‍ನ ಫಿರೋಜ್‍ಪುರದ ಹುಸೈನೀವಾಲಾದ ಗಡಿಯಲ್ಲಿ ಪಾಕಿಸ್ತಾನ 2 ಡ್ರೋನ್‍ಗಳನ್ನು ಕಳುಹಿಸಿದೆ. ಬಿಎಸ್‍ಎಫ್‍ನ ರಡಾರ್‍ನಲ್ಲಿ ಈ ಡ್ರೋನ್ ಪತ್ತೆಯಾಗಿದೆ. 5 ಬಾರಿ ಹೋರಾಟ ನಡೆಸಿರುವ ಡ್ರೋಣ್ ಗಡಿಯನ್ನೂ ಕ್ರಾಸ್ ಮಾಡಿದೆ. ಬೆಳಗ್ಗೆ 10 ರಿಂದ 10.40ರ ಅವಧಿಯಲ್ಲಿ ಈ ಘಟನೆ ನಡೆದಿದೆ. ಈ ಡ್ರೋನ್ ಮೂಲಕ ಶಸ್ತ್ರಾಸ್ತ್ರ ಅಥವಾ ಮಾದಕ ವಸ್ತುಗಳನ್ನು ಕಳುಹಿಸಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಮತ್ತು ಬಿಎಸ್‍ಎಫ್ ಯೋಧರು ಶೋಧ ಕಾರ್ಯ ಆರಂಭಿಸಿದ್ದಾರೆ. ಒಂದು ವಾರದ ಹಿಂದೆಯೂ ಇದೇ ರೀತಿ ಡ್ರೋನ್ ಪತ್ತೆಯಾಗಿತ್ತು. ಅದರಲ್ಲಿ ಗಡಿಯುದ್ದಕ್ಕೂ ಶಸ್ತ್ರಾಸ್ತ್ರಗಳನ್ನು ಕಳುಹಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು.

Contact Us for Advertisement

Leave a Reply