ದೆಹಲಿ ಹಿಂಸಾಚಾರದ ಪ್ರಮುಖ ಆರೋಪಿ ದೀಪ್ ಸಿಧು ಅರೆಸ್ಟ್

masthmagaa.com:

ಜನವರಿ 26ನೇ ತಾರೀಖು ದೆಹಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪಂಜಾಬಿ ನಟ ಮತ್ತು ಹೋರಾಟಗಾರ ದೀಪ್​ ಸಿಧುನನ್ನ ದೆಹಲಿ ಪೊಲೀಸರ ಸ್ಪೆಷಲ್ ಸೆಲ್ ಅರೆಸ್ಟ್ ಮಾಡಿದೆ. ಈತನನ್ನ ಚಂಡೀಗಢ ಮತ್ತು ಹರಿಯಾಣದ ಅಂಬಾಲ ನಡುವಿನ ಝೀರಕ್​ಪುರ್ ಎಂಬ ಏರಿಯಾದಿಂದ ಅರೆಸ್ಟ್ ಮಾಡಲಾಗಿದೆ. ಈತನ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪವಿದೆ. ಹಿಂಸಾಚಾರ ನಡೆದ ದಿನ ಈತ ಕೆಂಪು ಕೋಟೆ ಬಳಿಯೂ ಕಾಣಿಸಿಕೊಂಡಿದ್ದ. ಪ್ರಕರಣದಲ್ಲಿ ತನ್ನ ಹೆಸರು ಕೇಳಿ ಬರುತ್ತಿದ್ದಂತೇ ತಲೆ ಮರೆಸಿಕೊಂಡಿದ್ದ. ಹೀಗಾಗಿ ಈತನ ಬಗ್ಗೆ ಮಾಹಿತಿ ನೀಡಿದವರಿಗೆ, ಬಂಧನಕ್ಕೆ ಸಹಾಯ ಮಾಡಿದವರಿಗೆ ಪೊಲೀಸರು 1 ಲಕ್ಷ ನಗದು ಬಹುಮಾನ ಕೂಡ ಘೋಷಿಸಿದ್ದರು. ಇದೀಗ ಘಟನೆ ನಡೆದು 15 ದಿನಗಳಾದ ಬಳಿಕ ಈತ ಅರೆಸ್ಟ್ ಆಗಿದ್ದಾನೆ. ಇಷ್ಟುದಿನ ಕದ್ದು ಕೂತಿದ್ದ ದೀಪ್ ಸಿಧು ಸಿಕ್ಕಿದ್ದೇಗೆ ಅನ್ನೋ ಬಗ್ಗೆ ಪೊಲೀಸರು ಮಧ್ಯಾಹ್ನ 12 ಗಂಟೆಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಅಂದ್ಹಾಗೆ ಇಷ್ಟುದಿನ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದ ನಟಿಯೊಬ್ಬರ ಜೊತೆ ಸಂಪರ್ಕದಲ್ಲಿದ್ದ. ಆಕೆ ಆತನ ಸ್ನೇಹಿತೆ ಕೂಡ ಆಗಿದ್ದಳು. ದೀಪ್​ ಸಿಧು ವಿಡಿಯೋ ಮಾಡಿ ಆಕೆಗೆ ಕಳಿಸುತ್ತಿದ್ದ. ಆಕೆ ಅದನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಳು ಅಂತ ಮೂಲಗಳು ತಿಳಿಸಿವೆ. ದೆಹಲಿ ಹಿಂಸಾಚಾರ ಪ್ರಕರಣದ ತನಿಖೆಯನ್ನ 3 ಹಂತದಲ್ಲಿ ಮಾಡಲಾಗ್ತಿದೆ. ಒಂದ್ಕಡೆ ಸ್ಥಳೀಯ ಪೊಲೀಸರು, ಮತ್ತೊಂದ್ಕಡೆ ಸ್ಪೆಷಲ್ ಸೆಲ್, ಮಗದೊಂದು ಕಡೆ ಕ್ರೈಂ ಬ್ರಾಂಚ್.

-masthmagaa.com

Contact Us for Advertisement

Leave a Reply