ಪುಟಿನ್‌ಗೆ ಮತ್ತೊಮ್ಮೆ ಕಾರ್ಡಿಯಾಕ್‌ ಅರೆಸ್ಟ್?‌ ಈ ಬಾರಿ ಸತ್ಯವೇ?

masthmagaa.com:

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ಗೆ ಮತ್ತೊಮ್ಮೆ ಹೃದಯಾಘಾತ ಆಗಿದೆ ಅಂತ ರಷ್ಯಾದ ರಿಟೈರ್ಡ್‌ ಜನರಲ್‌ ಒಬ್ರು ಹೇಳಿಕೆ ನೀಡಿದ್ದಾರೆ. ಆದ್ರೆ ಇದು ಇನ್ನೊಂದು ವದಂತಿ ಅಷ್ಟೇ ಅಂತ ಕ್ರೆಮ್ಲಿನ್‌ ರಿಜೆಕ್ಟ್‌ ಮಾಡಿದೆ. ಪುಟಿನ್‌ ಅವರು ಆರೋಗ್ಯವಾಗಿದ್ದಾರೆ, ಫಿಟ್‌ ಅಂಡ್‌ ವೆಲ್‌ ಆಗಿದ್ದಾರೆ ಅಂತ ಕ್ರೆಮ್ಲಿನ್‌ ವಕ್ತಾರ ಡಿಮಿಟ್ರಿ ಪೆಸ್‌ಕೋವ್ ಹೇಳಿದ್ದಾರೆ. ಅಂದ್ಹಾಗೆ “ಅಕ್ಟೋಬರ್‌ 22ರ ರಾತ್ರಿ 9 ಗಂಟೆ ಹೊತ್ತಿನಲ್ಲಿ ಅಧ್ಯಕ್ಷರ ಕೊಠಡಿಯಿಂದ ಯಾರೋ ಕೆಳಗೆ ಬೀಳುವ ಶಬ್ಧ ಬಂತು. ಹೊರಗಿದ್ದ ಭದ್ರತಾ ಸಿಬ್ಬಂದಿ ಕೂಡಲೇ ಒಳಗಿ ಹೋಗಿ ನೋಡಿದ್ದಾರೆ. ಈ ವೇಳೆ ಪುಟಿನ್‌ ಆಹಾರ ಇಟ್ಟಿದ್ದ ಟೇಬಲ್‌ಅನ್ನ ಬುಡಮೇಲು ಮಾಡಿ, ತಾವು ಸಹ ಕುಸಿದು ನೆಲದ ಮೇಲೆ ಬಿದ್ದಿದ್ರು. ಈ ವೇಳೆ ಪುಟಿನ್‌ರ ಕಣ್ಣುಗಳು ತೇಲ್ತಾ ಇದ್ವು. ಈ ವಿಷಯ ನನಗೆ ಕ್ರೆಮ್ಲಿನ್‌ನ ವ್ಯಕ್ತಿಯೊಬ್ರು ನಡೆಸುತ್ತಿರೋ ಟೆಲಿಗ್ರಾಮ್‌ ಚಾನೆಲ್‌ ಒಂದರಿಂದ ತಿಳೀತು” ಅಂತ ಈ ರಿಟೈರ್ಡ್‌ ಜನರಲ್‌ ಹೇಳಿದ್ರು. ಅಂದ್ಹಾಗೆ 71 ವರ್ಷದ ಪುಟಿನ್‌ ಆರೋಗ್ಯದ ಕುರಿತಾದ ವಿಚಾರಗಳನ್ನ ಜೆನರಲ್‌ SVR ಅನ್ನೋ ಟೆಲಿಗ್ರಾಮ್‌ ಚಾನೆಲ್ ಬಹಳ ದಿನಗಳಿಂದ ಮಾನಿಟರ್‌ ಮಾಡಿ, ವರದಿ ಮಾಡ್ತಾ ಇದೆ.‌ ಕುಸಿದು ಬಿದ್ದಿದ್ದ ಪುಟಿನ್‌ ಅವರಿಗೆ ತುರ್ತು ಚಿಕಿತ್ಸೆ ನೀಡಿ ಸ್ಟೇಬಲ್‌ ಮಾಡಲಾಯಿತು ಅಂತ ಇದೇ ಟೆಲಿಗ್ರಾಮ್ ಚಾನೆಲ್‌ ವರದಿ ಮಾಡಿದೆ.

-masthmagaa.com

Contact Us for Advertisement

Leave a Reply