ರಷ್ಯಾ ಜೊತೆಗಿನ ಆಧುನಿಕ ಯುದ್ಧ ಡಿಫ್ರೆಂಟ್‌ ಇರುತ್ತೆ ಎಂದ ಪುಟಿನ್‌! ನ್ಯೂಕ್ಲಿಯಾರ್‌ ವೆಪನ್‌ ಬಳಸ್ತಾರ?

masthmagaa.com:

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ತಾವು ಯುಕ್ರೇನ್‌ ಮೇಲೆ ಮಾಡ್ತಿರೋ ಯುದ್ಧವನ್ನ ಜರ್ಮನಿಯ ನಾಝಿ ವಿರುದ್ಧ ರಷ್ಯಾ ಮಾಡಿದ್ದ ಯುದ್ಧಕ್ಕೆ ಹೋಲಿಸಿದ್ದಾರೆ. ಅಲ್ದೇ ನೆನ್ನೆ ಎರಡನೇ ವಿಶ್ವ ಯುದ್ಧದ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಪರಮಾಣು ಶಸ್ತ್ರಾಸ್ತ್ರದ ಬಳಕೆ ಮಾಡೋ ಬಗ್ಗೆ ಸುಳಿವು ನೀಡಿದ್ದಾರೆ ಅಂತ ವರದಿಯಾಗಿದೆ. ಅಂದ್ಹಾಗೆ ಜರ್ಮನಿ ತನ್ನ ಕೂಟದೊಂದಿಗೆ ಸೋವಿಯತ್ ಯೂನಿಯನ್‌ ಮೇಲೆ ಹಿಡಿತ ಸಾಧಿಸಲು ರಷ್ಯಾದ ನೈರುತ್ಯ ಭಾಗದಲ್ಲಿರುವ ಸ್ಟ್ಯಾಲಿನ್‌ಗ್ರಾಡ್‌‌ ನಗರದಲ್ಲಿ ಘನಘೋರ ಹೋರಾಟಕ್ಕಿಳಿದಿತ್ತು. ಫೆಬ್ರವರಿ 2, 1943 ರಂದು ಕೊನೆಗೊಂಡ ಈ ಯುದ್ದದಲ್ಲಿ ಅಂತಿಮವಾಗಿ ರಷ್ಯಾ ಗೆದ್ದಿತ್ತು. ಈ ಹಿನ್ನಲೆಯಲ್ಲಿ ಪ್ರತಿವರ್ಷ ಈ ಕಾರ್ಯಕ್ರಮವನ್ನ ರಷ್ಯಾ ಆಯೋಜನೆ ಮಾಡ್ಕೊಂಡು ಬರ್ತಿದೆ. ನಿನ್ನೆ ಕೂಡ ಇದರ ಆಚರಣೆ ಆಗಿದೆ. ಈ ವೇಳೆ ಯುಕ್ರೇನ್‌ ಮೇಲಿನ ತಮ್ಮ ಮಿಲಿಟರಿ ಕಾರ್ಯಾಚರಣೆಯನ್ನ ಎರಡನೇ ವಿಶ್ವ ಯುದ್ಧಕ್ಕೆ ಹೋಲಿಸಿ, ರಷ್ಯಾ ಈ ಯುದ್ಧವನ್ನ ಕೊನೆಯವರೆಗೂ ಮಾಡುತ್ತೆ ಅಂತ ಪುಟಿನ್‌ ಹೇಳಿದ್ದಾರೆ. ಜೊತೆಗೆ ಪಾಶ್ಚಿಮಾತ್ಯ ದೇಶಗಳ ಆಕ್ರಮಣವನ್ನ ಎದುರಿಸೋಕೆ ನಾವು ರೆಡಿ ಇದೀವಿ. ನಾವು ಯುಕ್ರೇನ್‌ ಗಡಿಗೆ ಟ್ಯಾಂಕ್‌ಗನ್ನ ಕಳಿಸ್ತಾ ಇಲ್ಲ. ಅದಕ್ಕೆ ನಾವು ಬೇರೆ ವಿಧಾನದಿಂದ ಪ್ರತಿಕ್ರಿಯೆ ನೀಡ್ತೀವಿ. ಇದು ಬರೀ ಕೇವಲ ಶಸ್ತ್ರಸಜ್ಜಿತ ವಾಹನಗಳನ್ನ ಬಳಸೋದಲ್ಲ. ಎಲ್ಲರೂ ಇದನ್ನ ಅರ್ಥ ಮಾಡಿಕೊಳ್ಬೇಕು ಅಂತ ಹೇಳಿರೋ ಪುಟಿನ್‌ರ ಈ ಮಾತು ಪರಮಾಣು ಶಸ್ತ್ರಾಸ್ತ್ರ ಬಳಸೋ ಬಗ್ಗೆ ಸುಳಿವು ಅಂತ ವಿಶ್ಲೇಷಣೆ ಮಾಡಲಾಗ್ತಿದೆ. ಇದೇ ವೇಳೆ ಜರ್ಮನಿಯ ಟ್ಯಾಂಕ್‌ಗಳಿಂದ ನಮಗೆ ಬೆದರಿಕೆ ಇದೆ ಅನ್ನೋದು ಸತ್ಯ ಅಂತ ಪುಟಿನ್‌ ಅಚ್ಚರಿಯ ಹೇಳಿಕೆಯನ್ನೂ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply