ಬೆಲಾರೂಸ್‌ಗೆ ತಲುಪಿದ ರಷ್ಯಾ ಶಸ್ತ್ರಾಸ್ತ್ರಗಳು!

masthmagaa.com:

ಯುಕ್ರೇನ್‌ ಸಂಘರ್ಷದ ಹಿನ್ನೆಲೆ ಅಮೆರಿಕ ಹಾಗೂ ಇತರ ಪಾಶ್ಚಿಮಾತ್ಯ ರಾಷ್ಟ್ರಗಳ ಜೊತೆ ಉದ್ವಿಗ್ನತೆ ಹೊಂದಿರುವ ರಷ್ಯಾ, ಮಿತ್ರ ರಾಷ್ಟ್ರ ಬೆಲಾರೂಸ್‌ ಗಡಿಯಲ್ಲಿ‌ ಟ್ಯಾಕ್ಟಿಕಲ್‌ ಪರಮಾಣು ಶಸ್ತ್ರಾಸ್ತ್ರಗಳನ್ನ ನಿಯೋಜಿಸಿದೆ. ಕಳೆದ ತಿಂಗಳು ಶಸ್ತ್ರಾಸ್ತ್ರಗಳನ್ನ ರಷ್ಯಾದಿಂದ ಬೆಲಾರೂಸ್‌ಗೆ ಸಾಗಿಸುವ ಪ್ರಕ್ರಿಯೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಚಾಲನೆ ನೀಡಿದ್ರು. ಇದೀಗ ಪರಮಾಣು ಶಸ್ತ್ರಾಸ್ತ್ರಗಳನ್ನ ಬೆಲಾರೂಸ್‌ಗೆ ಡೆಲಿವರಿ ಮಾಡಲಾಗಿದೆ ಅಂತ ಪುಟಿನ್‌ ಖಚಿತಪಡಿಸಿದ್ದಾರೆ. ಜೊತೆಗೆ ಇದು ಕೇವಲ ಮೊದಲ ಭಾಗ. ಈ ವರ್ಷದ ಅಂತ್ಯಕ್ಕೆ ಸಂಪೂರ್ಣ ಕೆಲಸ ಮುಗಿಸುತ್ತೇವೆ ಅಂತ ಹೇಳಿದ್ದಾರೆ. ಇತ್ತ ಬೆಲಾರೂಸ್‌ನ ಅಧ್ಯಕ್ಷ ಅಲೆಕ್ಸಾಂಡರ್‌ ಲುಕಾಶೆಂಕೊ ಕೂಡ ರಷ್ಯಾದಿಂದ ಶಸ್ತ್ರಾಸ್ತ್ರಗಳು ಬಂದಿರೋದಾಗಿ ಕನ್ಫರ್ಮ್‌ ಮಾಡಿದ್ದಾರೆ. ಅಂದ್ಹಾಗೆ ಮಾರ್ಚ್‌ನಲ್ಲೇ ಈ ಬಗ್ಗೆ ಪುಟಿನ್‌ ಅನೌನ್ಸ್‌ ಮಾಡಿದ್ರು. ಇನ್ನು ಈ ಟ್ಯಾಕ್ಟಿಕಲ್‌ ನ್ಯೂಕ್ಲಿಯರ್‌ ವೆಪನ್‌ಗಳು, ನ್ಯೂಕ್ಲಿಯರ್‌ ವೆಪನ್‌ಗಳಂತೆ ತುಂಬಾ ಸ್ಟ್ರಾಂಗ್ ಹಾಗೂ ಹೆಚ್ಚು‌ ವಿನಾಶ ಮಾಡುವ ಸಾಮರ್ಥ್ಯ ಹೊಂದಿರಲ್ಲ. ಇವು ಪರಮಾಣು ರಿಯಾಕ್ಶನ್‌ನ್ನ ಹೊಂದಿರೊ ಗ್ರಾವಿಟಿ ಸ್ಪೋಟಕಗಳು, ಶಾರ್ಟ್‌ ರೇಂಜ್‌ ಮಿಸೈಲ್‌ಗಳು ಹಾಗೂ ಲ್ಯಾಂಡ್‌ ಮೈನ್‌ಗಳನ್ನ ಹೊಂದಿರುತ್ತವೆ. ಶತ್ರು ದೇಶಗಳ ಆಕ್ರಮಣವನ್ನ ತಡೆಗಟ್ಟಲು ಗಡಿ ಪ್ರದೇಶಗಳಲ್ಲಿ ಇವನ್ನ ಬಳಸಲಾಗುತ್ತೆ. ಇನ್ನೊಂದ್‌ ಕಡೆ ಇತ್ತೀಚೆಗೆ ಯುಕ್ರೇನ್‌ನ ಕಾಖೊವ್ಕಾ (Kakhovka) ಡ್ಯಾಂ ಕುಸಿದು ಅಪಾರ ಹಾನಿಯಾಗಿತ್ತು. ಎರಡು ದೇಶಗಳು ಪರಸ್ಪರ ಆರೋಪವನ್ನ ಮಾಡಿದ್ದವು. ಇದೀಗ ಈ ಡ್ಯಾಂ ಕುಸಿಯೋಕೆ, ರಷ್ಯಾ ಪ್ಲ್ಯಾಂಟ್‌ ಮಾಡಿದ್ದ ಸ್ಪೋಟಕಗಳೇ ಕಾರಣ ಅಂತ ಯುಕ್ರೇನ್‌ ಅಧಿಕಾರಿಗಳಿಗೆ ತನಿಖೆಯಲ್ಲಿ ಹೆಲ್ಪ್‌ ಮಾಡ್ತಿರೋ ತಜ್ಞರ ತಂಡ ಹೇಳಿದೆ.

-masthmagaa.com

Contact Us for Advertisement

Leave a Reply