ಯುಕ್ರೇನ್‌ ಸೇನೆ ಹತ್ತಿಕಲು ದಾಳಿ ಮಾಡ್ತಿದ್ದೇವೆ: ರಷ್ಯಾಧ್ಯಕ್ಷ ಪುಟಿನ್!

masthmagaa.com:

ಯುದ್ದದಲ್ಲಿ ಯುಕ್ರೇನ್‌ ಮೇಲೆ ದಾಳಿ ನಡೆಸ್ತಿರೊ ವಿಚಾರವಾಗಿ ರಷ್ಯಾಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಮಾತನಾಡಿದ್ದಾರೆ. ಇತ್ತೀಚಿಗೆ ಯುಕ್ರೇನ್‌ನ ಎನರ್ಜಿ ಗ್ರಿಡ್‌ಗಳ ಮೇಲೆ ಏರ್‌ಸ್ಟ್ರೈಕ್‌ ನಡೆಸಿ, ಭಾರಿ ಪ್ರಮಾಣದ ಹಾನಿಯನ್ನುಂಟು ಮಾಡ್ತಿದ್ದೇವೆ. ಈ ಮೂಲಕ ನಾವು ಯುಕ್ರೇನ್‌ ಸೇನೆಯನ್ನ ಹತ್ತಿಕ್ಕೊ ಕೆಲ್ಸ ಮಾಡ್ತಿದ್ದೇವೆ ಅಂತ ಪುಟಿನ್‌ ಹೇಳಿದ್ದಾರೆ. ರಷ್ಯಾದ ತೈಲ ಸಂಸ್ಕರಣಾ ಘಟಕ ಸೇರಿದಂತೆ ಇತರ ಮೂಲ ಸೌಕರ್ಯಗಳನ್ನ ಯುಕ್ರೇನ್‌ ಟಾರ್ಗೆಟ್‌ ಮಾಡ್ತಿರೊದ್ರಿಂದ ಅದಕ್ಕೆ ಪ್ರತಿಯಾಗಿ ನಾವು ಈ ದಾಳಿಗಳನ್ನ ನಡೆಸ್ತಿದ್ದೀವಿ ಅಂತ ಪುಟಿನ್‌ ಹೇಳಿದ್ದಾರೆ. ರಷ್ಯಾದ ಮಿತ್ರ ಬೆಲರೂಸ್‌ನ ಅಧ್ಯಕ್ಷ ಅಲೆಕ್ಸಾಂಡರ್‌ ಲುಕಾಶೆಂಕೊ ಜೊತೆಗಿನ ಸಭೆಯಲ್ಲಿ ಪುಟಿನ್‌ ಈ ವಿಚಾರ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply