ಸೂರ್ಯನಿಗಿಂತಲೂ ಹೆಚ್ಚು ತೇಜಸ್ಸು! ಬಾಹ್ಯಾಕಾಶದ ಹೊಸ ವಿಸ್ಮಯ!

masthmagaa.com:

ಲೆಕ್ಕವಿಲ್ಲದಷ್ಟು ವಿಸ್ಮಯಗಳಿಂದ ತುಂಬಿರೋ ಬಾಹ್ಯಾಕಾಶ ಅಥ್ವಾ ಸ್ಪೇಸ್‌ ಪ್ರತೀ ಭಾರೀ ಏನಾದ್ರೊಂದು ಹೊಸ ವಿಷಯದಿಂದ ಎಲ್ಲರಿಗೆ ಶಾಕ್‌ ನೀಡುತ್ತೆ. ಇದೀಗ ಖಗೋಳಶಾಸ್ತ್ರಜ್ಞರು ಮಾಡಿರೋ ಡಿಸ್ಕವರಿಯಲ್ಲಿ ಸೂರ್ಯನಿಂದಲೂ ಬ್ರೈಟ್‌..ಪ್ರಕಾಶಮಾನವಾಗಿರೋ ವಸ್ತುವನ್ನ ಕಂಡುಹಿಡಿದಿದ್ದಾರೆ. ಎಸ್‌… ಅತೀದೊಡ್ಡ ಗಾತ್ರದ ಬ್ಲ್ಯಾಕ್‌ ಹೋಲ್‌ ಅಥ್ವಾ ಕಪ್ಪು ಕುಳಿಯನ್ನ ಪತ್ತೆ ಮಾಡಿದ್ದಾರೆ. ಇದು ದೂರದ ʻಕ್ವಾಸರ್‌ʼ (Quasar) ಅನ್ನೋ ಗ್ಯಾಲೆಕ್ಸಿಯ ನ್ಯುಕ್ಲಿಯಸ್‌ನ ಸೆಂಟರ್‌ನಲ್ಲಿದೆ. ಈ ಬ್ಲ್ಯಾಕ್‌ ಹೋಲ್‌ ಪ್ರತೀ ನಿತ್ಯ ನಮ್ಮ ಸೂರ್ಯನಷ್ಟು ದೊಡ್ಡ ಗಾತ್ರದ ನಕ್ಷತ್ರಗಳನ್ನ ನುಂಗಿ ಹಾಕ್ಬಿಡುತ್ತೆ. ಸೋ ಈ ರೀತಿ ಇಷ್ಟು ದೊಡ್ಡ ಗಾತ್ರದ ನಕ್ಷತ್ರಗಳನ್ನ ನುಂಗಿ ನುಂಗಿ…ಇದ್ರ ಸೈಜ್‌ ಕೂಡ ದಿನ ಕಳೆದಂತೆ ಬಹಳ ವೇಗವಾಗಿ ಬೆಳೀತಿದೆ. ಈ ಕಾರಣದಿಂದ… ಇದ್ರ ಸುತ್ತಲಿರೋ ಗ್ಯಾಲೆಕ್ಸಿ ನ್ಯುಕ್ಲಿಯಸ್‌ ʻಕ್ವಾಸರ್‌ʼ ಸಿಕ್ಕಾಪಟ್ಟೆ ಬ್ರೈಟ್‌ ಆಗಿ ಕಾಣುತ್ತೆ. ಅಂದ್ರೆ ಈ ಬ್ಲ್ಯಾಕ್‌ ಹೋಲ್‌ ತನ್ನ ಸ್ಟ್ರಾಂಗ್‌ ಗುರುತ್ವಾಕರ್ಷಣೆ ಶಕ್ತಿಯಿಂದ ನಕ್ಷತ್ರಗಳನ್ನ ನುಂಗಿ… ಆ ನಕ್ಷತ್ರಗಳು ಹೊರಸೂಸುವ ಬೆಳಕಿನಿಂದ ಈ ಕ್ವಾಸರ್‌ ನ್ಯುಕ್ಲಿಯಸ್‌ ಬ್ರೈಟ್‌ ಆಗಿ ಕಾಣ್ಸುತ್ತೆ ಎನ್ನಲಾಗಿದೆ. ಸೋ, ಇದುವರೆಗೆ ಸ್ಪೇಸ್‌ನಲ್ಲಿ ಪತ್ತೆಯಾದ ಅತ್ಯಂತ ಪ್ರಕಾಶಮಾನವಾದ ವಸ್ತು ಅಂದ್ರೆ ಈ ʻಕ್ವಾಸರ್‌ʼ. ಹೀಗಂತ ಯುರೋಪಿಯನ್‌ ಸದರ್ನ್‌ ಅಬ್ಸರ್ವೇಟರಿ ಇದೀಗ ಅನೌನ್ಸ್‌ ಮಾಡಿದೆ. ಅಂದ್ಹಾಗೆ ಈ ʻಕ್ವಾಸರ್‌ʼ ನಮ್ಮ ಭೂಮಿಯಿಂದ ಎಷ್ಟು ದೂರವಿದೆ ಅಂದ್ರೆ ಅದ್ರ ಬೆಳಕು ನಮ್ಮ ಗ್ರಹವನ್ನ ರೀಚ್‌ ಆಗ್ಬೇಕಾದ್ರೆ 12 ಬಿಲಿಯನ್‌ ಅಂದ್ರೆ 1,200 ಕೋಟಿ ವರ್ಷಗಳ ಟೈಮ್‌ ತೆಗೆದ್ಕೊಂಡಿದೆ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply