ಎಲೆಜಿಬೆತ್‌-2 ನಿಧನ: ಇಂಗ್ಲೆಂಡ್‌ನಲ್ಲಿ 10 ದಿನ ಶೋಕಾಚರಣೆ, 4 ದಿನ ಪಾರ್ಥೀವ ಶರೀರ ಸಾರ್ವಜನಿಕ ದರ್ಶನ

masthmagaa.com:

ಇತ್ತೀಚೆಗೆ ತಾನೇ ಹೊಸ ಪ್ರಧಾನಿಯನ್ನ ಪಡೆದ ಬ್ರಿಟನ್‌ನ ಆಗಸದಲ್ಲಿ ದುಃಖದ ಕಾರ್ಮೋಡ ಮಡುಗಟ್ಟಿದೆ. ಬ್ರಿಟನ್‌ನ ಇತಿಹಾಸದಲ್ಲಿಯೇ ಸುದೀರ್ಘ ಕಾಲ ರಾಣಿಯಾಗಿದ್ದ ಕ್ವೀನ್‌ ಎಲಿಜೆಬೆತ್‌-2 ನೆನ್ನೆ ತಡರಾತ್ರಿ ನಿಧನರಾಗಿದ್ದಾರೆ. 96 ವರ್ಷದ ರಾಣಿ ಎಲಿಜೆಬೆತ್‌ ಎಲೆಕ್ಸಾಂಡ್ರಾ ಮೇರಿ ಸ್ಕಾಟ್ಲಾಂಡ್‌ನ ಬಲ್ಮೋರಲ್‌ ಕ್ಯಾಸಲ್ ಎಸ್ಟೇಟ್‌ನಲ್ಲಿ ವಿಧಿವಶರಾಗಿದ್ದಾರೆ ಅಂತ ಬಕಿಂಗ್‌ಹ್ಯಾಮ್‌ ಅರಮನೆ ಅಧಿಕೃತವಾಗಿ ತಿಳಿಸಿದೆ. ಇದ್ರ ಬೆನ್ನಲ್ಲೇ ಆಟೋಮ್ಯಾಟಿಕ್‌ ಆಗಿ ಈಗ ಅವ್ರ ಹಿರಿಯ ಮಗ, 73 ವರ್ಷದ ಯುವರಾಜ, ಮೂರನೇ ಚಾರ್ಲ್ಸ್‌ ಬ್ರಿಟನ್‌ನ ರಾಜ ಆಗಿದ್ದಾರೆ. 1953ರ ಜೂನ್‌ 2 ರಂದು ಅಧಿಕಾರ ಸ್ವೀಕರಿಸಿದ್ದ ಎಲಿಜೆಬೆತ್‌ 2, 70 ವರ್ಷಗಳ ಸುಧೀರ್ಘ ಕಾಲ ಬ್ರಿಟನ್‌ನ ರಾಣಿಯಾಗಿ ಅಧಿಕಾರ ನಿಭಾಯಿಸಿದ್ರು. ಇನ್ನು ಮೃತರ ಗೌರವಾರ್ಥ ಬ್ರಿಟನ್‌ ಸರ್ಕಾರ, 10 ದಿನದ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದೆ. ಪಾರ್ಥೀವ ಶರೀರವನ್ನ ಬಾಲ್ಮೋರಲ್‌ನ ಎಸ್ಟೇಟ್‌ನಲ್ಲಿಯೇ ಇರಿಸಲಾಗಿದ್ದು, ಎಡಿನ್‌ಬರಾದಲ್ಲಿ ಕೆಲ ಕಾಲ ಇಡಲಾಗುತ್ತೆ. ನಂತ್ರ ರಾಯಲ್‌ ಟ್ರೈನ್‌ನಲ್ಲಿ ಲಂಡನ್‌ಗೆ ತರಲಾಗುತ್ತೆ. ತದನಂತ್ರ ಲಂಡನ್‌ನ ವೆಸ್ಟ್‌ ಮಿನಿಸ್ಟರ್‌ ಹಾಲ್‌ನಲ್ಲಿ ನಾಲ್ಕು ದಿನಗಳ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಡಲಾಗುತ್ತೆ. ವೆಸ್ಟ್‌ಮಿನಿಸ್ಟರ್‌ ಅಬ್ಬೆ ಚರ್ಚ್‌ನಲ್ಲಿ ಬ್ರಿಟನ್‌ ರಾಣಿಯ ಅಂತ್ಯಕ್ರಿಯೆ ನೆರವೇರುತ್ತೆ.

-masthmagaa.com

Contact Us for Advertisement

Leave a Reply