ಮೊದಲ ಮಗುವಿನ ನಿರೀಕ್ಷೆಯಲ್ಲಿ “ರಾಧಾಕಲ್ಯಾಣ”ದ ರಾಧಿಕಾ

masthmagaa.com:

ರಾಧಾ ಕಲ್ಯಾಣ ಖ್ಯಾತಿಯ ರಾಧಿಕಾ ರಾವ್‌ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ‘ಮಂಗಳೂರು ಹುಡ್ಗಿ ಹುಬ್ಬಳ್ಳಿ ಹುಡ್ಗ’ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟ ರಾಧಿಕಾ ರಾವ್ ಬಹುಬೇಗ ಫೇಮಸ್ ಆದರು. ‘ಮಂಗಳೂರು ಹುಡ್ಗಿ ಅಮೂಲ್ಯ’ ಆಗಿಯೇ ಗುರುತಿಸಿಕೊಂಡಿರುವ ರಾಧಿಕಾ ರಾವ್, ಇಂಟರ್ ನ್ಯಾಷನಲ್ ಮ್ಯಾಜಿಷಿಯನ್ ಮತ್ತು ಮೈಂಡ್ ರೀಡರ್ ಆಕರ್ಷ್ ಜೊತೆ ಮಾರ್ಚ್‌ 11, 2020ರಲ್ಲಿ ಹಸೆಮಣೆ ಏರಿದ್ದರು. ರಾಧಾ ಕಲ್ಯಾಣ ಖ್ಯಾತಿಯ ರಾಧಿಕಾ ರಾವ್‌ ಸೋಷಿಯಲ್‌ ಮೀಡಿಯಾದಲ್ಲಿ ‘ನೀನು ಹಾಗೂ ನಾನು, ಈಗ ಮೂವರು” ಎಂದು ಬರೆದು, ತಮ್ಮ ಗಂಡನೊಂದಿಗಿನ ಪೋಟೊವನ್ನ ಶೇರ್‌ ಮಾಡಿ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದ್ದಾರೆ. ಸಿನಿ ತಾರೆಯರು, ಸ್ನೇಹಿತರು, ಅಭಿಮಾನಿಗಳು ಶುಭಾಷಯವನ್ನ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply