ಬರ್ತ್‌ ಡೇ ಗೆ ರಾಧಿಕಾ ಪಂಡಿತ್‌ ಕೊಟ್ರು ಬಿಗ್‌ ಅಪ್‌ಡೇಟ್‌

masthmagaa.com:

ಸ್ಯಾಂಡಲ್‌ವುಡ್‌ ಕ್ವೀನ್‌ ರಾಧಿಕಾ ಪಂಡಿತ್‌ ತಮ್ಮ ಬರ್ತ್ಡೇಗೆ ಒಂದು ದಿನ ಮುಂಚಿತವಾಗಿಯೇ ಫ್ಯಾನ್ಸ್‌ಗಳಿಗೆ ಸಂದೇಶವೊಂದನ್ನ ಕೊಟ್ಟಿದ್ದಾರೆ. ಆಲ್‌ಟೈಮ್‌ ಫೇವರೇಟ್‌ ಆದಂತ ರಾಧಿಕಾ ಪಂಡಿತ್‌ ಮದುವೆಯಾದ ಮೇಲೆ ಕೇವಲ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿದ್ರು. ನಿರೂಪ್‌ ಭಂಡಾರಿ ನಾಯಕ ನಟನಾಗಿ ನಟಿಸಿದ “ಆದಿ ಲಕ್ಷ್ಮೀ ಪುರಾಣ”ದಲ್ಲಿ ನಟಿಸಿದ್ರು. ನಂತರ ತಮ್ಮ ಫ್ಯಾಮಿಲಿ, ಮಕ್ಕಳು ಇದರಲ್ಲೇ ಬ್ಯುಸಿ ಆಗಿ ಬಿಟ್ಟರು. ಎಲ್ಲೂ ನಟಿಸದೇ ಇದ್ರು ಸಹ ಯಾವಗಲೂ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಟಚ್‌ನಲ್ಲಿ ಇರ್ತಿದ್ರು. ಮಾರ್ಚ್‌ 7,ಅಂದರೆ ನಾಳೆ ರಾಧಿಕಾ ಅವರ ಹುಟ್ಟಿದ ಹಬ್ಬ ಇದೆ. ಪ್ರತಿ ವರ್ಷವೂ ಸಹ ಫ್ಯಾನ್ಸ್‌ ಅವರ ಮನೆ ಮುಂದೆ ಹೋಗಿ ಸೆಲಬ್ರೇಟ್‌ ಮಾಡೋದು ಕಾಮನ್‌ ಬಿಡಿ. ಈ ಬಾರಿ ಮುಂಚಿತವಾಗಿಯೇ ತಾವು ಮನೆಯಿಂದ ದೂರ ಇರುವ ವಿಚಾರವನ್ನ ತಿಳಿಸಿದ್ದಾರೆ. ದೂರದ ಊರಲ್ಲಿ ಬರ್ತ್‌ಡೇ ಆಚರಿಸಿಕೊಳ್ಳುವುದಾಗಿ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. “ಇದೇ ಮೊದಲ ಬಾರಿಗೆ ಮನೆಯಿಂದ ದೂರ ಹೋಗಿ ಬರ್ತ್‌ಡೇ ಆಚರಿಸಿಕೊಳ್ಳಲಿದ್ದೇನೆ. ನನ್ನ ಪ್ರೀತಿಯ ಅಭಿಮಾನಿಗಳಿಗೆ ಇದರಿಂದ ಬೇಸರ ಆಗಬಹುದು ಎಂಬುದು ನನಗೆ ತಿಳಿದಿದೆ. ಹಾಗಾಗಿ ಇಲ್ಲಿ ಒಂದು ಆ್ಯಕ್ಟಿವಿಟಿ ಪ್ಲ್ಯಾನ್ ಮಾಡಿದ್ದೇನೆ. ಆ ಮೂಲಕ ನಿಮ್ಮ ಜೊತೆ ಸಂಪರ್ಕದಲ್ಲಿ ಇರಬಹುದು ಎಂದು ರಾಧಿಕಾ ಪಂಡಿತ್ ಪೋಸ್ಟ್ ಮಾಡಿದ್ದಾರೆ”. ಎಲ್ಲಿಗೆ ಹೋಗ್ತಾರೆ, ಆಕ್ಟಿವಿಟಿ ಯಾವುದು ಅನ್ನೋದ್ರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇವರ ಮುಂದಿನ ಪೋಸ್ಟ್‌ ಬರುವ ತನಕ ಕಾಯಬೇಕಾಗಿದೆ.

-masthmagaa.com

Contact Us for Advertisement

Leave a Reply