ಯಶ್ ಮತ್ತು ರಾಧಿಕಾ ನಡುವೆ ಜಗಳ..! ಯಾಕೆ ಗೊತ್ತಾ..?

ಬೆಂಗಳೂರು: ಯಶ್-ರಾಧಿಕಾ ನಡುವೆ ಜಗಳವಾಗಿದೆ. ಅರೆ ಯಾಕಪ್ಪಾ ಜಗಳ ಅಂತಾ ಟೆನ್ಶನ್ ಆಗ್ಬೇಡಿ. ಯಾಕಂದ್ರೆ ಇದು ಸಿನಿಮಾದಲ್ಲಿ ಆಗಿರೋ ಫೈಟ್​​. ಇಬ್ರು ಒಟ್ಟಿಗೆ ಸಿನಿಮಾ ಮಾಡಿದ್ರಾ..? ಯಾವುದದು ಅಂತಿರಾ..? ನೋ ನೋ ಸದ್ಯ ರಾಧಿಕಾ ಪಂಡಿತ್ ಗರ್ಭಿಣಿ.. ಸದ್ಯ ಸಿನಿಮಾ ಮಾಡೋ ಸೀನ್ ಇಲ್ಲ.. ಆದ್ರು ಗಂಡನಿಗೆ ‘ಗಿರ್ಮಿಟ್’ ಚಿತ್ರಕ್ಕೋಸ್ಕರ ಆವಾಜ್ ಹಾಕಿದ್ದಾರೆ. ಕೆಜಿಎಫ್‌ ಸಂಗೀತ ನಿರ್ದೇಶಕ ರವಿ ಬಸ್ರೂರು ‘ಗಿರ್ಮಿಟ್’ ಸಿನಿಮಾ ಮಾಡ್ತಿದ್ದು, ಇದರ ಟ್ರೇಲರ್ ರಿಲೀಸ್ ಆಗಿದೆ. ಈ ಟ್ರೇಲರ್ ಗೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ವಾಯ್ಸ್ ಡಬ್ ಮಾಡಿದ್ದಾರೆ. ಅಂದ ಹಾಗೆ ಇದು ಮಕ್ಕಳ ಸಿನಿಮಾ ಆಗಿದ್ದು ಪ್ರಿತಿ, ಸ್ನೆಹ, ಫ್ಯಾಮಿಲಿ ಸೆಂಟಿಮೆಂಟ್‌, ಸಾಹಸ ಎಲ್ಲವು ಸಿನಿಮಾದಲ್ಲಿದೆ.

ಪುಟ್ಟ ನಾಯಕ ಹಾಗೂ ನಾಯಕಿಗೆ ಟ್ರೇಲರ್ ನಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಧ್ವನಿಯಾಗಿದ್ದಾರೆ. ಇಲ್ಲಿ ರಾಧಿಕಾ ಪಂಡಿತ್ ಗೆ ಯಶ್ ಡೈಲಾಗ್ ಹೊಡೆದರೆ, ಯಶ್ ಗೆ ರಾಧಿಕಾ ಆವಾಜ್ ಹಾಕಿದ್ದು, ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಮಕ್ಕಳ ಬಾಯಲ್ಲಿ ಮಾಸ್ ಡೈಲಾಗ್ ಹೇಳಿಸುವ ಮೂಲಕ ಚಿತ್ರವನ್ನ ವಿಭಿನ್ನವಾಗಿ ಮಾಡುತ್ತಿದ್ದಾರೆ. ಸದ್ಯ ಯೂ ಟ್ಯೂಬ್ ನಲ್ಲಿ ಟ್ರೇಲರ್ ಸಖತ್ ಸೌಂಡ್ ಮಾಡ್ತಿದೆ. ಎನ್ ಎಸ್ ರಾಜ್ ಕುಮಾರ್ ಚಿತ್ರದ ನಿರ್ಮಾಪಕರಾಗಿದ್ದಾರೆ.

Contact Us for Advertisement

Leave a Reply