ಚೀನಾ ಗಡಿಯಲ್ಲಿ ರಫೇಲ್..! ಚೀನಾಗೆ ಶಾಕ್ ಕೊಟ್ಟ ಭಾರತ..!

ಬಾಲಾಕೋಟ್ ಏರ್‍ಸ್ಟ್ರೈಕ್ ಬಳಿಕ ಭಾರತಕ್ಕೆ ಗಡಿ ರಕ್ಷಣೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇನ್ಮುಂದೆ ಅಷ್ಟೊಂದು ಟೆನ್ಶನ್ ಇರೋದಿಲ್ಲ. ಯಾಕಂದ್ರೆ ಗಡಿಭಾಗದಲ್ಲಿ ರಫೇಲ್ ಸೇನೆಯ ಬಲವನ್ನು ಹೆಚ್ಚಿಸಲಿದೆ. ವಿಶೇಷ ಅಂದ್ರೆ ಪಾಕಿಸ್ತಾನ ಗಡಿಯಲ್ಲಿ ರಫೇಲ್ ನಿಯೋಜಿಸೋ ಬದಲು ಮೊದಲಿಗೆ ಚೀನಾ ಗಡಿಯಲ್ಲಿ ನಿಯೋಜಿಸಲು ನಿರ್ಧರಿಸಲಾಗಿದೆ. ಈ ಮೂಲಕ ಚೀನಾದ ವಿರುದ್ಧ ಎಲ್ಲಾ ರೀತಿಯ ಹೋರಾಟಕ್ಕೆ ಸೇನೆ ಸಜ್ಜಾಗಲಿದೆ. ಸದ್ಯದಲ್ಲೇ ರಫೇಲ್ ಯುದ್ಧ ವಿಮಾನ ಮತ್ತು ಅಪಾಚೆ ಹೆಲಿಕಾಪ್ಟರ್ ನ್ನು ಭಾರತದ ಈಶಾನ್ಯ ಭಾಗ ಅಂದ್ರೆ ಇಂಡೋ-ಚೀನಾ ಗಡಿಯಲ್ಲಿ ನಿಯೋಜಿಸಲಾಗುತ್ತೆ ಅಂತ ಸೇನಾ ವಕ್ತಾರರು ಹೇಳಿದ್ದಾರೆ. ಈ ಮೂಲಕ ಅರುಣಾಚಲ ಪ್ರದೇಶದ ವಿಚಾರದಲ್ಲಿ ಚೀನಾ ಆಕ್ರಮಣಕಾರಿ ನೀತಿ ಅನುಸರಿಸುತ್ತಾ ಬಂದಿದೆ. ಹೀಗಾಗಿ ಈಶಾನ್ಯದಲ್ಲಿ ಈಗಾಗಲೇ ಈ ವಿಮಾನಗಳು ಇಳಿಯಲು ಅಗತ್ಯವಾದ ಲ್ಯಾಂಡಿಂಗ್ ಗ್ರೌಂಡ್‍ಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗಿದೆ. ಅಕ್ಟೋಬರ್ 8ರ ವಿಜಯದಶಮಿಯ ದಿನದಂದು ಭಾರತೀಯ ವಾಯುಸೇನೆಗೆ ಮೊದಲ ರಫೇಲ್ ಯುದ್ಧ ವಿಮಾನ ಸಿಗಲಿದೆ. ಒಟ್ಟು 36 ವಿಮಾನಗಳು ಖರೀದಿಯಾಗಿದ್ದು, ಹಂತ ಹಂತವಾಗಿ ಭಾರತಕ್ಕೆ ಬರಲಿವೆ.

Contact Us for Advertisement

Leave a Reply