ಬಿಜೆಪಿ ವಿರುದ್ಧ ರಾಹುಲ್‌ ಕಿಡಿ: ಮ್ಯಾಚ್‌ ಫಿಕ್ಸಿಂಗ್‌ನಿಂದ 400 ಪಾರ್

masthmagaa.com:

ಬಿಜೆಪಿ ವಿರುದ್ಧ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅರೆಸ್ಟ್‌ ಅಸ್ತ್ರ ಹಿಡ್ಕೊಂಡು ರೆಡಿಯಾಗಿರೋ INDI ಮೈತ್ರಿ ಕೂಟ ಭಾನುವಾರ ಬೃಹತ್‌ ರ‍್ಯಾಲಿ ನಡೆಸಿದೆ. ದೆಹಲಿಯ ರಾಮಲೀಲಾ ಮೈದಾನದಲ್ಲಿ ʻಲೋಕತಂತ್ರ ಬಚಾವೋʼ ಅಥವಾ ಪ್ರಜಾಪ್ರಭುತ್ವ ಉಳಿಸಿ ಅನ್ನೋ ಹೆಸರಿನಲ್ಲಿ ಮೈತ್ರಿ ಕೂಟ ರ‍್ಯಾಲಿ ನಡೆಸಿದೆ. ಆ ಮೂಲಕ ಮತ್ತೊಮ್ಮೆ ಬಿಜೆಪಿ ವಿರುದ್ಧ ಒಗ್ಗಟ್ಟಿನ ಅಸ್ತ್ರ ಪ್ರಯೋಗಿಸಿದೆ. ಈ ರ‍್ಯಾಲಿಯಲ್ಲಿ ಕೇಜ್ರಿವಾಲ್‌ ಪತ್ನಿ ಸುನಿತಾ ಕೇಜ್ರಿವಾಲ್‌ ಹಾಗೂ ಜಾರ್ಖಂಡ್‌ ಸಿಎಂ ಹೇಮಂತ್‌ ಸೊರೇನ್‌ ಪತ್ನಿ ಕಲ್ಪನಾ ಸೊರೇನ್‌ ಭಾಗವಹಿಸಿದ್ದಾರೆ. ಈ ವೇಳೆ ಬಿಜೆಪಿ ಕಾಲೆಳೆದಿರೋ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಬಿಜೆಪಿ ಈ ಬಾರಿ 400ಕ್ಕೂ ಹೆಚ್ಚು ಸೀಟು ಗೆಲ್ಲೋದಾಗಿ ಹೇಳಿದೆ. 400 ಸೀಟು ಕ್ರಾಸ್‌ ಮಾಡೋಕೆ ಮ್ಯಾಚ್‌ ಫಿಕ್ಸಿಂಗ್‌ ಮಾಡ್ಕೊಂಡ್ರೆ ಮಾತ್ರ ಸಾಧ್ಯ. ಇದಕ್ಕಾಗಿ ಪಿಎಂ ಮೋದಿ ಅಂಪೈರ್‌ಗಳನ್ನ ಫಿಕ್ಸ್‌ ಮಾಡ್ಕೋತಾರೆ. ಈಗಾಗ್ಲೆ ನಮ್ಮ ಟೀಂನ ಇಬ್ಬರು ಪ್ಲೇಯರ್‌ಗಳನ್ನ ಅರೆಸ್ಟ್‌ ಮಾಡಿದ್ದಾರೆ ಅಂತೇಳಿದ್ದಾರೆ. ಅಲ್ಲದೆ ಈ ಮ್ಯಾಚ್‌ ಫಿಕ್ಸಿಂಗ್‌, EVMಗಳು, ಸೋಷಿಯಲ್‌ ಮೀಡಿಯಾ ಹಾಗೂ ಮಾಧ್ಯಮಗಳ ಸಪೋರ್ಟ್‌ ಇಲ್ದಿದ್ರೆ, ಬಿಜೆಪಿ 180 ಸೀಟ್‌ ಗೆಲ್ಲೋದು ಕಷ್ಟ ಅಂತ ಹೇಳಿದ್ದಾರೆ. ಇನ್ನು ಸುನಿತಾ ಕೇಜ್ರಿವಾಲ್‌ ಅವ್ರು ಮಾತನಾಡಿ, ʻಅರವಿಂದ್‌ ಕೇಜ್ರಿವಾಲ್‌ ಸಿಂಹ ಇದ್ದಂತೆ, ಹೆಚ್ಚು ದಿನ ಅವ್ರನ್ನ ಜೈಲಲ್ಲಿಡೋಕಾಗಲ್ಲ ಅಂದಿದ್ದಾರೆ.

ಇದೇ ವೇಳೆ ಇಂಡಿಯಾ ಬ್ಲಾಕ್‌ 5 ಬೇಡಿಕೆಗಳನ್ನ ಇಟ್ಟಿದೆ. ಭಾರತದ ಚುನಾವಣಾ ಆಯೋಗ ಲೋಕಸಭೆ ಚುನಾವಣೆಯಲ್ಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸ್ಬೇಕು. ಚುನಾವಣೆಯನ್ನ ಮ್ಯಾನುಪುಲೇಟ್‌ ಮಾಡ್ತಿರೋ IT, CBI, EDಗಳ ಒತ್ತಾಯಪೂರ್ವಕ ಕ್ರಮಗಳನ್ನ ನಿಲ್ಲಿಸ್ಬೇಕು. ಹೇಮಂತ್‌ ಸೊರೇನ್‌ ಹಾಗೂ ಕೇಜ್ರಿವಾಲ್‌ರನ್ನ ತಕ್ಷಣ ಬಿಡುಗಡೆ ಮಾಡ್ಬೇಕು. ಆರ್ಥಿಕವಾಗಿ ಪ್ರತಿಪಕ್ಷಗಳ ಕತ್ತುಹಿಸುಕೋದನ್ನ ನಿಲ್ಲಿಸ್ಬೇಕು. ಬಿಜೆಪಿ ಚುನಾವಣಾ ಬಾಂಡ್‌ ಮೂಲಕ ಹಣ ವಸೂಲಿ ಮಾಡಿರೋದನ್ನ, ಜೊತೆಗೆ ವಿಪಕ್ಷಗಳ ಮೇಲೆ ಬಿಜೆಪಿ ಮಾಡಿರೋ ಮನಿ ಲಾಂಡ್ರಿಂಗ್‌ ಆರೋಪಗಳ ತನಿಖೆ ಮಾಡಲು, ಸುಪ್ರಿಂ ಕೋರ್ಟ್‌ ಕಣ್ಗಾವಲಿನಲ್ಲಿ ವಿಶೇಷ ತನಿಖಾ ತಂಡ ರಚಿಸ್ಬೇಕು ಅಂತ ಕೇಳಿದೆ.

-masthmagaa.com

Contact Us for Advertisement

Leave a Reply