ತಮ್ಮ ʻಬಿಸ್ಕಟ್‌ ವಿಡಿಯೋʼಗೆ ಸ್ಪಷ್ಟನೆ ನೀಡಿದ ರಾಹುಲ್‌ ಗಾಂಧಿ!

masthmagaa.com:

ಭಾರತ್‌ ಜೋಡೋ ಯಾತ್ರೆ ವೇಳೆ ನಾಯಿಯೊಂದು ಬೇಡ ಅಂತ ಬಿಟ್ಟ ಬಿಸ್ಕೆಟ್‌ನ್ನ ಕಾರ್ಯಕರ್ತರಿಗೆ ನೀಡಿದ್ದ ರಾಹುಲ್‌ ಗಾಂಧಿಯವರನ್ನ ಬಿಜೆಪಿ ತೀವ್ರ ಟೀಕೆ ಮಾಡಿತ್ತು. ಇದೀಗ ರಾಹುಲ್‌ ರಿಯಾಕ್ಟ್‌ ಮಾಡಿದ್ದಾರೆ. ʻವಿಡಿಯೋದಲ್ಲಿ ನಾನು ಬಿಸ್ಕೆಟ್‌ ನೀಡಿದ್ದ ವ್ಯಕ್ತಿ ಆ ನಾಯಿಯ ಓನರ್‌. ನಾನು ನಾಯಿಗೆ ಬಿಸ್ಕೆಟ್‌ ಕೊಟ್ಟಾಗ, ಅದು ಭಯಪಟ್ಕೊಂಡು ಬಿಸ್ಕೆಟ್‌ ತಿನ್ನಲೇ ಇಲ್ಲ. ಆದ್ರಿಂದ ನಾನು ಆ ಬಿಸ್ಕೆಟ್‌ನ್ನ ನಾಯಿ ಓನರ್‌ಗೆ ಕೊಟ್ಟೆ. ನಂತ್ರ ಓನರ್‌ ತನ್ನ ಕೈಯಾರೆ ಬಿಸ್ಕೆಟ್‌ ಕೊಟ್ಟಾಗ ತಟ್ಟಂತ ನಾಯಿ ತಿಂದು ಬಿಡ್ತು. ಇದ್ರಲ್ಲಿ ಏನ್‌ ಸಮಸ್ಯೆ ಕಾಣ್ತೋ ನನಗಂತೂ ಗೊತ್ತಿಲ್ಲʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply