ರಾಜ್ ಕುಂದ್ರಾಗೆ ಜಾಮೀನು: 2 ತಿಂಗಳ ಜೈಲು ವಾಸ ಅಂತ್ಯ!

masthmagaa.com:

ಉದ್ಯಮಿ ಮತ್ತು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರನ್ನ ಅಶ್ಲೀಲ ಚಿತ್ರ ಪ್ರಕರಣ ಸಂಬಂಧ ಎರಡು ತಿಂಗಳ ಹಿಂದೆ ಬಂಧಿಸಲಾಗಿತ್ತು. ಆದ್ರೆ ಈಗ ಮುಂಬೈನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ನೀಡಿದೆ.

ಕುಂದ್ರಾ ಸಹವರ್ತಿ ರಯಾನ್ ಥೋರ್ಪೆರನ್ನು ಜುಲೈನಲ್ಲಿ ಬಂಧಿಸಲಾಗಿತ್ತು ಈಗ ಇಬ್ಬರಿಗೂ ನ್ಯಾಯಾಲಯ ಜಾಮೀನು ನೀಡಿದೆ.

ರಾಜ್ ಕುಂದ್ರಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್ ಸಲ್ಲಿಸಿದ ಪೂರಕ ಚಾರ್ಜ್ ಶೀಟ್ ನಲ್ಲಿ ಆತನ ವಿರುದ್ಧ ಒಂದೇ ಒಂದು ಸಾಕ್ಷ್ಯವೂ ಇಲ್ಲ ಎಂದು ಹೇಳಿದ್ದರು.ಅಶ್ಲೀಲ ಚಿತ್ರಗಳ ನಿರ್ಮಾಣದಲ್ಲಿ ‘ಸಕ್ರಿಯವಾಗಿ’ ಭಾಗಿಯಾಗಿದ್ದ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಈ ಪ್ರಕರಣದಲ್ಲಿ ತನ್ನನ್ನು ‘ಬಲಿಪಶು’ ಮಾಡಲಾಗಿದೆ ಎಂದು ಕುಂದ್ರಾ ಹೇಳಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply