ರಾಜಸ್ಥಾನದಲ್ಲಿ ದಸರಾ ಮೆರವಣಿಗೆ ಮೇಲೆ ಕಲ್ಲು, ಕಾಲ್ತುಳಿತ, ಕಫ್ರ್ಯೂ

ರಾಜಸ್ಥಾನದ ಟೋಂಕ್ ಜಿಲ್ಲೆಯ ಮಾಲ್‍ಪುರದ ದಸರಾ ಮೆರವಣಿಗೆಯಲ್ಲಿ ಭಾರಿ ಗಲಾಟೆ ನಡೆದಿದೆ. ದಸರಾ ಮೆರವಣಿಗೆ ಇಲ್ಲಿನ RAC ಚೌಕಿ ಬಳಿ ಸಾಗುವಾಗ ಹೂವು ಹಾಕಿ ಸ್ವಾಗತಿಸಲಾಯ್ತು. ಆದ್ರೆ ಕೆಲ ದುಷ್ಕರ್ಮಿಗಳು ಮೆರವಣಿಗೆ ಮೇಲೆ ಕಲ್ಲು ಎಸೆದಿದ್ದಾರೆ. ಇದ್ರಿಂದ ಜನ ದಿಕ್ಕಾಪಾಲಾಗಿ ಓಡಿಹೋಗಿದ್ದು, ಕಾಲ್ತುಳಿತ ಕೂಡ ಸಂಭವಿಸಿದೆ.

ಇದರಿಂದ ಬೇಸೆತ್ತ ಸ್ಥಳೀಯ ಶಾಸಕ ಕನ್ಹೈಯ್ಯಾ ಲಾಲ್ ನೂರೈವತ್ತು ಜನರೊಂದಿಗೆ ಸ್ಥಳದಲ್ಲೇ ಧರಣಿ ಕುಳಿತಿದ್ದಾರೆ. ಅಲ್ಲದೆ ರಾವಣ ದಹನಕ್ಕೂ ಅಡ್ಡಿಪಡಿಸಿದ್ದಾರೆ. ಎಲ್ಲಿಯವರೆಗೆ ಕಲ್ಲು ಎಸೆದ ಆರೋಪಿಗಳನ್ನು ಅರೆಸ್ಟ್ ಮಾಡುವುದಿಲ್ಲವೋ ಅಲ್ಲಿಯವರೆಗೆ ನಾವು ರಾವಣ ದಹನಕ್ಕೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತೆ ಎಂದು ಹೆದರಿದ ಸ್ಥಳೀಯ ಆಡಳಿತ ಬೆಳ್ಳಂಬೆಳಗ್ಗೆ 4.30ಕ್ಕೆ ರಾವಣ ದಹನ ಮಾಡಿ, 6 ಗಂಟೆಗೆ ಕಫ್ರ್ಯೂ ಹೇರಲಾಗಿದೆ. ಇನ್ನೂ ಕೂಡ ಪೊಲೀಸ್ ಠಾಣೆ ಮುಂದೆ ಶಾಸಕ ಹನ್ಹೈಯ್ಯಾ ಲಾಲ್ ಪ್ರತಿಭಟನೆ ನಡೆಸುತ್ತಿದ್ದಾರೆ. ಅದ್ರೆ ಪೊಲೀಸರು ಮಾತ್ರ ನಾವು ಈಗಾಗಲೇ 6-7 ಜನರನ್ನು ಅರೆಸ್ಟ್ ಮಾಡಿದ್ದೇವೆ ಎಂದಿದ್ದಾರೆ.

Contact Us for Advertisement

Leave a Reply