AI ಪ್ಲಾಟ್‌ಫಾರ್ಮ್‌ಗಳಿಗೆ ಕೇಂದ್ರ ಸರ್ಕಾರದಿಂದ ಹೊಸ ಎಚ್ಚರಿಕೆ!

masthmagaa.com:

ಇತ್ತೀಚೆಗಷ್ಟೇ ಪ್ರಧಾನಿ ಮೋದಿಯವ್ರ ವಿರುದ್ಧ ಗೂಗಲ್‌ ಜೆಮಿನಿ AI ಪ್ಲಾಟ್‌ಫಾರ್ಮ್‌ ನೆಗೆಟಿವ್‌ ಆಗಿ ಪ್ರತಿಕ್ರಿಯೆ ನೀಡಿ ದೊಡ್ಡ ಕೋಲಾಹಲಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೆ ಇದೀಗ ಕೇಂದ್ರ ಸರ್ಕಾರ ಟೆಕ್‌ ಕಂಪನಿಗಳಿಗೆ ಎಚ್ಚರಿಕೆ ನೀಡಿದೆ. ʻಯಾವ್ದೇ ಒಂದು AI ಪ್ಲಾಟ್‌ಪಾರ್ಮ್‌ನ್ನ ಪಬ್ಲಿಕ್‌ಗೆ ಪರಿಚಯ ಮಾಡೋಕೂ ಮೊದಲು ಸರ್ಕಾರದಿಂದ ಒಪ್ಪಿಗೆ ಪಡೀಲೆಬೇಕು. ಅವುಗಳ ವಿಶ್ವಾಸರ್ಹತೆಯ ಬಗ್ಗೆ ಕ್ಲಿಯರ್‌ ಆಗಿ ಲೇಬಲ್‌ ಮಾಡಿʼ ಅಂತ ಕೇಂದ್ರ ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಸೂಚಿಸಿದ್ದಾರೆ. ʻಗೂಗಲ್‌ನ ಜೆಮಿನಿ ಮಾಡಿರೋ ಕೆಲಸ ಬಹಳ ಮುಜುಗರ ತಂದಿತ್ತು. ನಂತ್ರ ಕಾನೂನಿಂದ ತಪ್ಪಿಸಿಕೊಳ್ಳೋಕೆ…ಆ AI ಪ್ಲಾಟ್‌ಫಾರ್ಮ್‌ನ ಟ್ರಾಯಲ್‌ ನಡೆಸಲಾಗ್ತಿತ್ತು ಅಂತೆಲ್ಲಾ ಹೇಳೋದು ಕಾರಣಾನೇ ಅಲ್ಲ. ಸೋ ಇಂತಹ AI ಪ್ಲಾಟ್‌ಪಾರ್ಮ್‌ಗಳನ್ನ ಪಬ್ಲಿಕ್‌ ಯುಸ್‌ಗೆ ನೀಡೋ ಮೊದಲು ಗ್ರಾಹಕರಿಗೆ ಪ್ಲಾಟ್‌ಫಾರ್ಮ್‌ ಬಗ್ಗೆ ಎಲ್ಲಾ ಮಾಹಿತಿ ನೀಡ್ಬೇಕು….ಬಹಿರಂಗ ಪಡಿಸ್ಬೇಕು. ಸರ್ಕಾರದಿಂದ ಒಪ್ಪಿಗೆ ಪಡೀಬೇಕುʼ ಅಂತ ಅಡ್ವೈಸ್‌ ಮಾಡಿದ್ದಾರೆ. ಜೊತೆಗೆ ʻಇಂತಹ AI ಪ್ಲಾಟ್‌ಫಾರ್ಮ್‌ನಿಂದ ಏನಾದ್ರು ದೋಷವಾದ ನಂತ್ರ ಕ್ಷಮೆ ಕೇಳಿ ಶಿಕ್ಷೆಯಿಂದ ಎಸ್ಕೇಪ್‌ ಆಗೋಕೆ ಸಾಧ್ಯವಿಲ್ಲʼ ಅಂತ ವಾರ್ನಿಂಗ್‌ ನೀಡಿದ್ದಾರೆ.

-masthmagaa.com

Contact Us for Advertisement

Leave a Reply