ಜೈಲರ್‌ ಟೀಸರ್‌ನಲ್ಲಿ ರಜನಿ-ಶಿವಣ್ಣ ಖದರ್‌!

masthmagaa.com:

ರಜನಿಕಾಂತ್‌, ಶಿವಣ್ಣ ಅಭಿನಯದ ಜೈಲರ್‌ ಮೂವಿಯ ರಿಲೀಸ್‌ ಡೇಟ್‌ ಫೈನಲ್‌ ಆಗಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಬಹಿನೀರಿಕ್ಷಿತ ಜೈಲರ್‌ ಚಿತ್ರದ ಟೀಸರ್‌ ಕೂಡ ರಿಲೀಸ್‌ ಆಗಿದೆ. ಸನ್ ಪಿಕ್ಚರ್ಸ್ ಪ್ರೋಡ್ಯೂಸ್‌ ಮಾಡ್ತಾ ಇರುವಂತ ಈ ಚಿತ್ರದ ಈ ಟೀಸರ್‌, ಎಲ್ಲಾ ಪಾತ್ರಗಳನ್ನ ಬ್ಲಿಂಕ್-ಅಂಡ್-ಯು-ಮಿಸ್ ಶಾಟ್‌ಗಳನ್ನು ಹೊಂದಿದೆ. ಈ ಟೀಸರ್‌ನಲ್ಲಿ ಹ್ಯಾಟ್ರಿಕ್‌ ಹೀರೋ ಶಿವಣ್ಣ ಕೂಡ ಕಾಣಿಸಿಕೊಂಡಿದ್ದಾರೆ.

ರಜನಿಕಾಂತ್‌ ಅಭಿನಯದ ಜೈಲರ್‌ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಗಳು ಇದೆ. ಹ್ಯಾಟ್ರಿಕ್‌ ಹೀರೋ ಶಿವಣ್ಣ ಮಾತ್ರವಲ್ಲದೇ ಮಲಯಾಳಂ ಸುಪರ್‌ ಸ್ಟಾರ್‌ ಮೋಹನ್ ಲಾಲ್ ಕೂಡ ಕಾಣಿಸಲಿದ್ದಾರೆ. ತಮನ್ನಾ ಭಾಟಿಯಾ, ಸುನೀಲ್, ರಮ್ಯಾ ಕೃಷ್ಣನ್, ರೆಡಿನ್ ಕಿಂಗ್ಸ್ಲಿ ಮತ್ತು ವಿನಾಯಕನ್ ಕೂಡ ಜೈಲರ್ ಚಿತ್ರದಲ್ಲಿ ನಟಿಸಿದ್ದಾರೆ. ಇಷ್ಟೆಲ್ಲಾ ತಾರಾಗಣ ಇರುವಂತ ಜೈಲರ್‌ ಚಿತ್ರ ಅಗಸ್ಟ್‌ 10ಕ್ಕೆ ರಿಲೀಸ್‌ ಆಗಲಿದೆ.

-masthmagaa.com

Contact Us for Advertisement

Leave a Reply