POK ಭಾರತ ಜೊತೆ ವಿಲೀನವಾಗುತ್ತೆ: ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌

masthmagaa.com:

ಇನ್ನು ಈ ಬೆಳವಣಿಗೆಗಳ ನಡುವೆಯೇ ಭಾರತದಿಂದ ಮಹತ್ವದ ಹೇಳಿಕೆ ಹೊರಬಿದ್ದಿದೆ. ಪಾಕ್‌ ಆಕ್ರಮಿತ ಕಾಶ್ಮೀರ ಭಾರತದೊಂದಿಗೆ ವಿಲೀನವಾಗುತ್ತೆ ಅಂತ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಪುನರುಚ್ಚಾರ ಮಾಡಿದ್ದಾರೆ. ಇಂಟರ್‌ವ್ಯೂ ಒಂದ್ರಲ್ಲಿ ರಾಜ್‌ನಾಥ್‌ ಸಿಂಗ್‌ ಮಾತಾಡ್ತಾ ಇದ್ರು. ಈ ವೇಳೆ ಇತ್ತೀಚೆಗೆ ಪಾಕ್‌ ಪ್ರಧಾನಿ ಶೆಹಬಾಜ್‌ ಶರೀಫ್‌ ಪ್ರಮಾಣ ವಚನ ಸ್ವೀಕಾರ ಮಾಡೋ ವೇಳೆ ಕಾಶ್ಮೀರವನ್ನ ಸ್ವತಂತ್ರಗೊಳಿಸ್ತೀವಿ ಅಂತೇಳಿರೋ ಬಗ್ಗೆ ನಿಮ್ಮ ಅಭಿಪ್ರಾಯವೇನು ಅಂತ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ರಕ್ಷಣಾ ಸಚಿವರು, ʻ ಪಾಕಿಸ್ತಾನದವರು ಎಂದಾದ್ರೂ ಕಾಶ್ಮೀರ ಕಿತ್ತುಕೊಳ್ಳೋಕೆ ಸಾಧ್ಯವಿದೆಯಾ? ಅವರು ತಮ್ಮ ಕಂಟ್ರೋಲ್‌ನಲ್ಲಿರೋ ಪಾಕ್‌ ಆಕ್ರಮಿತ ಕಾಶ್ಮೀರದ ಬಗ್ಗೆ ಚಿಂತೆಮಾಡಬೇಕು. ಹಾಗಂತ ನಾವು ಪಾಕ್‌ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ಮಾಡಿ ಆಕ್ರಮಣ ಮಾಡೋ ಅವಶ್ಯಕತೆ ಇಲ್ಲ. ಇದನ್ನ ನಾನು ಒಂದುವರೆ ವರ್ಷದ ಹಿಂದೇನೇ ಹೇಳಿದ್ದೇನೆ. ಆದರೆ ಅಲ್ಲಿನ ಜನ ಸ್ವತಃ ಅವ್ರಾಗೇ ಮುಂದೆ ಬಂದು ಈ ಪ್ರದೇಶವನ್ನ ಭಾರತ ಜೊತೆ ವಿಲೀನ ಮಾಡಿ ಅಂತ ಡಿಮಾಂಡ್‌ ಮಾಡ್ತಿದ್ದಾರೆ. ಸೋ ಅಂತಹ ಪರಿಸ್ಥಿತಿ ಈಗ ಡೆವೆಲಪ್‌ ಆಗ್ತಿದೆʼ ಅಂತ ಹೇಳಿದ್ದಾರೆ. ಇನ್ನೊಂದು ಕಡೆ ಭಾರತ ಸರ್ಕಾರ ಈ ಬಗ್ಗೆ ಏನಾದ್ರೂ ಪ್ಲಾನ್‌ ಮಾಡ್ತಿದ್ಯಾ, ದಾಳಿ ಮಾಡಿ ಪಿಒಕೆ ವಶಕ್ಕೆ ಪಡೀತೀರಾ ಅಂತ ಪ್ರಶ್ನಿಸಲಾಯ್ತು. ಇದಕ್ಕೆ ಉತ್ತರಿಸಿದ ಅವ್ರು, ʻಈ ಬಗ್ಗೆ ನಾನೇನೂ ಹೇಳಬಾರ್ದು. ಆದ್ರೆ ನಾವು ಯಾವ್ದೇ ದೇಶದ ಮೇಲೆ ದಾಳಿ ಮಾಡೋದಿಲ್ಲ. ಅದು ಭಾರತ ಗುಣ ಅಲ್ಲ. ಆದ್ರೆ ಈ ಪಾಕ್‌ ಆಕ್ರಮಿತ ಕಾಶ್ಮೀರ ನಮ್ಮದಾಗಿತ್ತು. ಈಗಲೂ ಕೂಡ ನಮ್ಮದೇ…ಮುಂದೆ ಭಾರತದೊಂದಿಗೆ ವಿಲೀನ ಆಗೇ ಆಗುತ್ತೆ ಅನ್ನೋ ವಿಶ್ವಾಸ ನನಗಿದೆʼ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply