ರಾಮ್‌ ಚರಣ್‌ ಈಗ “ಗೇಮ್‌ ಚೇಂಜರ್‌”

masthmagaa.com:

ಮಾರ್ಚ್‌ 27 ಅಂದ್ರೆ ಇವತ್ತು ರಾಮ್‌ ಚರಣ್‌ ಅವರ ಹುಟ್ಟಿದಹಬ್ಬ. ಬರ್ತ್‌ಡೇ ದಿನದಂದು ತಮ್ಮ ಹೊಸ ಚಿತ್ರದ ಬಗ್ಗೆ ಅನೌನ್ಸ್‌ ಮಾಡುವ ಮೂಲಕ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ.
ರಾಮ್‌ಚರಣ್‌ ಅಭಿನಯದ ಆರ್‌ಆರ್‌ಆರ್‌ ಸಿನಿಮಾದ “ನಾಟು ನಾಟು ” ಹಾಡಿಗೆ ಬೆಸ್ಟ್‌ ಒರಿಜಿನಲ್‌ ಸಾಂಗ್‌ ಅಂತ ಆಸ್ಕರ್‌ ಪ್ರಶಸ್ತಿ ಸಿಕ್ಕಿತ್ತು. ಆಸ್ಕರ್‌ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ರಾಮ್‌ ಚರಣ್‌ ಕೂಡ ಭಾಗವಹಿಸಿದ್ದರು. ಇದೀಗ ಮತ್ತೊಂದು ಸಿನಿಮಾದ ಮೂಲಕ ತೆರೆ ಮೇಲೆ ಬರಲಿದ್ದಾರೆ. ಗೇಮ್‌ ಚೇಂಜರ್‌ ಎಂಬ ಹೆಸರಿನ ಈ ಚಿತ್ರವನ್ನ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡ್ಕೊಳೋ ಮುಖಾಂತರ ಅಭಿಮಾನಿಗಳಲ್ಲಿ ಕ್ಯೂರಿಯಾಸಿಟಿಯನ್ನ ಹುಟ್ಟುಹಾಕಿದ್ದಾರೆ. ತಮಿಳಿಮ ಖ್ಯಾತ ಡೈರೆಕ್ಟರ್‌ ಶಂಕರ್‌ ಅವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದೆ. ಕಿಯಾರಾ ಅಡ್ವಾಣಿ ರಾಮ್‌ ಚರಣ್‌ಗೆ ನಾಯಕಿಯಾಗಿ ನಟಿಸಲಿದ್ದಾರೆ. ತಮ್ಮ15ನೇ ಸಿನಿಮಾದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿಯನ್ನು ಹಂಚಿಕೊಂಡ ರಾಮ್ ಚರಣ್, “ಗೇಮ್ ಚೇಂಜರ್ ಇಟ್ ಈಸ್” ಎಂದು ಬರೆದು ವಿಡಿಯೋ ರಿವೀಲ್ ಮಾಡಿದ್ದಾರೆ. ಅಭಿಮಾನಿಗಳಂತು ” ಮತ್ತೊಂದು ಹಿಟ್‌ ಸಿನಿಮಾಗಾಗಿ ಕಾಯ್ತಾ ಇದೀವಿ ಅಂತ ಸಾಲು ಸಾಲು ಕಾಮೆಂಟ್‌ಗಳನ್ನ ಮಾಡ್ತಾ ಇದಾರೆ. ಇನ್ನು ರಾಮ್‌ಚರಣ್‌ ಅವರ ಹುಟ್ಟಿದಹಬ್ಬಕ್ಕೆ ಅಭಿಮಾನಿಗಳು, ಸ್ನೇಹಿತರು, ಹಾಗೂ ಚಿತ್ರತಂಡ ಶುಭಾಷಯವನ್ನ ಹೇಳಿದಾರೆ.

-masthmagaa.com

Contact Us for Advertisement

Leave a Reply