ರಂಜಾನ್ ಉಪವಾಸದ ವೇಳೆ ಏನಾದ್ರು ತಿಂದ್ರೆ ಜೈಲು ಫಿಕ್ಸ್!

masthmagaa.com:

ಈಗ ಮುಸ್ಲಿಮರ ಪವಿತ್ರ ರಂಜಾನ್ ತಿಂಗಳು ನಡಿತಾ ಇದೆ. ಬಹುತೇಕ ಮುಸ್ಲಿಮರು ಈ ತಿಂಗಳು ಉಪವಾಸ ವ್ರತ ಮಾಡ್ತಾರೆ. ಈ ನಡುವೆ ಬಹ್ರೇನ್​​ನಲ್ಲಿ ಹೊಸ ಕಾನೂನು ತರಲಾಗಿದೆ. ಉಪವಾಸದ ಸಮಯದಲ್ಲಿ ಯಾರಾದ್ರೂ ಸಾರ್ವಜನಿಕವಾಗಿ ಆಹಾರ ಸೇವಿಸೋದು, ನೀರು ಕುಡಿಯೋದು ಕಂಡು ಬಂದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಅಂತ ಬಹ್ರೇನ್ ಸರ್ಕಾರ ಆದೇಶಿಸಿದೆ. ರಂಜಾನ್ ಸಮಯದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಉಪವಾಸ ಇರುತ್ತೆ. ಈ ವೇಳೆ ಆಹಾರ ಸೇವನೆಗೆ ಅವಕಾಶ ಇರೋದಿಲ್ಲ. ಒಂದ್ವೇಳೆ ಸೇವಿಸಿದ್ರೆ ಅದನ್ನು ಅಪರಾಧ ಅಂತಲೇ ಭಾವಿಸಲಾಗುತ್ತೆ. ಆದ್ರೆ ದುಬೈನಲ್ಲಿ ಈ ಬಾರಿ ಈ ನಿಯಮಗಳಿಗೆ ಅಂತ್ಯ ಹಾಡಲಾಗಿದ್ದು, ರೆಸ್ಟೋರೆಂಟ್​​ಗಳು ಬಾಗಿಲು ತೆರೆಯಲು ಅನುಮತಿ ನೀಡಲಾಗಿದೆ. ಆದ್ರೆ ಬಹ್ರೇನ್ ಹಳೇ ಕಟ್ಟುಪಾಡುಗಳನ್ನು ಮುಂದುವರಿಸಲಾಗಿದೆ. ಅಂದ್ರೆ ಉಪವಾಸದ ವೇಳೆ ಆಹಾರ ಸೇವಿಸಿ ಸಿಕ್ಕಿಬಿದ್ರೆ ದಂಡದ ಜೊತೆಗೆ 1 ವರ್ಷ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇರುತ್ತೆ. ಒಂದ್ವೇಳೆ ಈ ಸಮಯದಲ್ಲಿ ಯಾರಾದ್ರೂ ಆಹಾರ ಸೇವಿಸಬೇಕಾದ್ರೆ ನೇರವಾಗಿ ಮನೆಗೆ ತೆಗೆದುಕೊಂಡು ಹೋಗಿ ಸೇವಿಸಬೇಕೆಂದು ಸೂಚಿಸಲಾಗಿದೆ.

-masthmagaa.com

Contact Us for Advertisement

Leave a Reply