“100” ಟ್ರೈಲರ್ ರಿಲೀಸ್ ವೇಳೆ ಅಪ್ಪು ನೆನೆದು ಭಾವುಕರಾದ ರಮೇಶ್ ಅರವಿಂದ್!

masthmagaa. com:

ರಮೇಶ್‌ ಅರವಿಂದ್‌ ನಟಿಸಿ, ನಿರ್ದೇಶಿಸಿರುವ ‘100’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಇನ್ಸ್‌ಪೆಕ್ಟರ್ ವಿಷ್ಣು ಪಾತ್ರದಲ್ಲಿ ರಮೇಶ್ ಕಾಣಿಸಿಕೊಂಡಿದ್ದಾರೆ.  ಒಂದು ಮೊಬೈಲ್ ಫೋನ್‌ನಿಂದ ಏನೆಲ್ಲಾ ಆಗುತ್ತದೆ ಎನ್ನುವುದನ್ನ ಒಂದು ಫ್ಯಾಮಿಲಿಯೊಳಗಿನ ಘಟನೆಗಳ ಮೂಲಕ ಚಿತ್ರದಲ್ಲಿ ಹೇಳಲಾಗಿದೆ.

ರಮೇಶ್ ಅರವಿಂದ್ ನಟನೆಯ ‘100’ ಚಿತ್ರತಂಡವು ಸುದ್ದಿಗೋಷ್ಠಿಗೂ ಮುನ್ನ ಅಗಲಿದ ನಟ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದೆ. ಬೆಂಗಳೂರಿನ ರೇಣುಕಾಂಬ ಚಿತ್ರಮಂದಿರದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ರಮೇಶ್ ಅರವಿಂದ್ ಮಾತನಾಡಿ, ಪುನೀತ್ ಜೊತೆಗಿನ ಒಡನಾಟವನ್ನು ಸ್ಮರಿಸಿಕೊಂಡಿದ್ದಾರೆ. ಪುನೀತ್ ಫೋಟೋಗೆ ಹೂ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದ ರಮೇಶ್ ಅರವಿಂದ್ ಹಾಗೂ ಚಿತ್ರತಂಡ ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡಿ ಅಪ್ಪುಗೆ ಗೌರವ ಸಲ್ಲಿಸಿದ್ದಾರೆ. ಬಳಿಕ ಅಪ್ಪು ಒಂದು ದೊಡ್ಡ ಅದ್ಬುತ. ಅವರಲ್ಲಿ ಒಬ್ಬ ಸ್ಟಾರ್, ಡಾನ್ಸರ್, ಫೈಟರ್, ಎಲ್ಲವೂ ಇತ್ತು. ನಾನು ಅಪ್ಪು ಅವರ ಜೊತೆ ಸಾಯೋ ಮೊದಲ ದಿನ ಎರಡು ಗಂಟೆ ಜೀವನದ ಬಗ್ಗೆ ಗುರುಕಿರಣ್ ಮನೆ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಮಾತನಾಡಿದ್ದೆ. ಆದರೆ ಮರು ದಿನ ಅಪ್ಪು ಇಲ್ಲ. ಅಪ್ಪು ಬಿಟ್ಟ ಜಾಗವನ್ನ ತುಂಬೋದು ಬಹಳ ಕಷ್ಟ. ನಾವೆಲ್ಲಾ ಸೇರಿ ಪುನೀತ್ ರಾಜ್ ಕುಮಾರ್‌ಗೆ ನಮನ ಸಲ್ಲಿಸಬೇಕು ಎಂದು ರಮೇಶ್ ಭಾವುಕರಾಗಿ ನುಡಿದಿದ್ದಾರೆ.
100′ ಸಿನಿಮಾ ಸೈಬರ್‌ ಕ್ರೈಮ್‌ ಆಧಾರಿತ ಸಿನಿಮಾವಾಗಿದೆ. ರಮೇಶ್‌ ಅರವಿಂದ್‌ ಜತೆ ರಚಿತಾ ರಾಮ್‌, ಪೂರ್ಣಾ ನಟಿಸಿದ್ದು, ಇದು ಫ್ಯಾಮಿಲಿ ಥ್ರಿಲ್ಲರ್‌ ಜಾನರ್‌ನ ಸಿನಿಮಾವಾಗಿದೆ. ವಿಶೇಷ ಎಂದರೆ ರಮೇಶ್‌ ಅರವಿಂದ್‌ ಫ್ಯಾಮಿಲಿ ಮ್ಯಾನ್ ಆಗಿ ಕುಟುಂಬದ ರಕ್ಷಣೆ ಮತ್ತು ಪೊಲೀಸ್ ಆಗಿ ತಮ್ಮ ಕರ್ತವ್ಯ ನಿಭಾಯಿಸುವ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸುರ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಚಿತ್ರ ತಯಾರಾಗಿದ್ದು,  ಶ್ರೀಮತಿ ಉಮಾ, ಶ್ರೀ ಎಂ. ರಮೇಶ್ ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸತ್ಯ ಹೆಗಡೆ ಕ್ಯಾಮರಾ ಕೈಚಳಕ, ಶ್ರೀನಿವಾಸ್ ಕಲಾಲ್ ಸಂಕಲನ, ಗುರು ಕಶ್ಯಪ್ ಸಂಭಾಷಣೆ,  ಧನ೦ಜಯ ನೃತ್ಯ ಸಂಯೋಜನೆ, ಜಾಲಿ ಬಾಸ್ಟಿನ್, ಡಾ.ರವಿವರ್ಮ ಸಾಹಸ ಈ ಚಿತ್ರಕ್ಕಿದೆ. ರಚಿತಾ ರಾಮ್, ಪೂರ್ಣ, ಪ್ರಕಾಶ್ ಬೆಳವಾಡಿ, ಶೋಭರಾಜ್, ರಾಜು ತಾಳಿಕೋಟೆ,  ಮಾಲತಿ ಸುಧೀರ್, ಬೇಬಿ ಸ್ಮಯ ಸೇರಿದಂತೆ ಮುಂತಾದವರ ತಾರಾಬಳಗ ಚಿತ್ರಕ್ಕಿದೆ.
-masthmagaa.com
Contact Us for Advertisement

Leave a Reply