ಶಿಷ್ಯನ ಬಗ್ಗೆ ಸವದಿ ಮಾತು ಕೇಳಿ `ಸಾಹುಕಾರ’ ಕೆಂಡ..!

ಅನರ್ಹ ಶಾಸಕ ಮಹೇಶ್ ಕುಮಟಳ್ಳಿಗೆ ಲಕ್ಷ್ಣಣ್ ಸವದಿ ನಿಂದಿಸಿದ್ದಕ್ಕೆ ರಮೇಶ್ ಜಾರಕಿಹೊಳಿ ಕೆಂಡಾಮಂಡಲರಾಗಿದ್ದಾರೆ. ಲಕ್ಷ್ಣಣ ಸವದಿ ನಾಲಗೆ ಬಿಗಿಹಿಡಿದು ಮಾತನಾಡಲಿ. ಆತ 2018ರಲ್ಲಿ ಸೋತಿದ್ದು ಆ ನಾಲಗೆಯಿಂದಲೇ ಅಂತ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಇನ್ನು ಲಕ್ಷ್ಮಣ್ ಸವದಿ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಮಹೇಶ್ ಕುಮಟಳ್ಳಿ ಬಗ್ಗೆ ಮಾತನಾಡಿಲ್ಲ. ನಾನು ಮಾತನಾಡಿದ್ದು ನನ್ನ ಸ್ನೇಹಿತ ಮತ್ತೋರ್ವ ಕುಮಟಳ್ಳಿ ಇದ್ದಾರೆ ಅವರ ಬಗ್ಗೆ. ಸುಮ್ಮನೆ ಸುಳ್ಳು ಪ್ರಚಾರ ಮಾಡಲಾಗುತ್ತಿದೆ ಅಂತ ಕಿಡಿಕಾರಿದ್ರು. ಅಲ್ಲದೆ ನಾನು ಮತ್ತು ಮಹೇಶ್ ಕುಮಟಳ್ಳಿ ಇಬ್ಬರೂ ಸ್ನೇಹಿತರು. ಜೊತೆಗೇ ಹೋಗುತ್ತೇವೆ. ಜೊತೆಯಾಗೇ ಇರುತ್ತೇವೆ. ಸುಮ್ಮನೆ ನಾನು ಯಾರಿಗೋ ಹೇಳಿದ ಮಾತನ್ನು ಮಹೇಶ್ ಕುಮಟಳ್ಳಿಗೆ ಜೋಡಿಸುತ್ತಿದ್ದಾರೆ. ಅಲ್ಲದೆ ಇದನ್ನು ವಿಡಿಯೋ ಮಾಡಿ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಅಂದ್ರು.

Contact Us for Advertisement

Leave a Reply