ಇನ್ನೂ 10 CD ಬೇಕಿದ್ರೆ ಬರಲಿ, ನನ್ನ ಜೇಬಲ್ಲೂ ಒಂದು ಬಾಂಬ್ ಇದೆ!

masthmagaa.com:

ರಮೇಶ್​ ಜಾರಕಿಹೊಳಿ ಖಾಸಗಿ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಇವತ್ತು ಹೇಳಿಕೆ ಬಿಡುಗಡೆ ಮಾಡಿದ ಬೆನ್ನಲ್ಲೇ ರಮೇಶ್​ ಜಾರಕಿಹೊಳಿ ಕೂಡ ಅದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ‘ಇದು ಎಷ್ಟು ದೊಡ್ಡ ಷಡ್ಯಂತ್ರ ಅಂತ ನೀವೇ ನೋಡಿ. ಇನ್ನೂ 10 CD ಬೇಕಾದ್ರೆ ಬರಲಿ. ಅದನ್ನ ಎದುರಿಸೋಕೆ ನಾನು ರೆಡಿ ಇದ್ದೀನಿ. ಆ ಯುವತಿ ಯಾರ ಕೆಳಗೆ ಕೆಲಸ ಮಾಡಿದ್ದಾಳೆ ಅನ್ನೋದನ್ನ ನೀವೇ ವಿಚಾರ ಮಾಡಿ. ಇದು ಹೈ ಪ್ರೊಫೈಲ್ ಕೇಸ್​. ಇದರಲ್ಲಿ ನಾನಂತೂ ತಪ್ಪು ಮಾಡಿಲ್ಲ. ಆದ್ರೆ ತಪ್ಪು ಮಾಡಿದವರನ್ನ ಜೈಲಿಗೆ ಕಳಿಸದೇ ಸುಮ್ಮನೆ ಕೂರಲ್ಲ. ನನ್ನ ಜೇಬಲ್ಲೂ ಒಂದು ಬಾಂಬ್​ ಇದೆ, ಸಾಕ್ಷ್ಯಾಧಾರಗಳಿವೆ. ಅದನ್ನ ಬಿಟ್ರೆ ನೀವು ಶಾಕ್ ಆಗ್ತೀರಿ. ಮೊನ್ನೆವರೆಗೆ ಸಿದ್ದರಾಮಯ್ಯ ಮೇಲೆ ಗೌರವ ಇತ್ತು. ಆದ್ರೆ ನನ್ನ ಮೇಲೆ ಅತ್ಯಾಚಾರ ಕೇಸ್ ಹಾಕ್ಬೇಕು ಎಂದಿದ್ದಾರೆ. ಇರಲಿ.. ಸಿದ್ದರಾಮಯ್ಯಗೆ ಒಳ್ಳೆದಾಗಲಿ’ ಅಂತ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply