ರಾಮೇಶ್ವರಂ ಕೆಫೆ ಪ್ರಕರಣ: 10 ದಿನ NIA ವಶಕ್ಕೆ ಬಂಧಿತ ಉಗ್ರರು!

masthmagaa.com:

ರಾಮೇಶ್ವರಂ ಕೆಫೆ ಸ್ಫೋಟದ ಪ್ರಕರಣದಲ್ಲಿ ಅರೆಸ್ಟ್‌ ಆಗಿರೊ ಮುಸ್ಸಾವಿರ್‌ ಹುಸೇನ್‌ ಶಾಜೀಬ್‌ ಮತ್ತು ಅಬ್ದುಲ್‌ ಮತೀನ್‌ ತಾಹಾನನ್ನ ನ್ಯಾಯಾಧೀಶರು 10 ದಿನಗಳ ವರೆಗೆ NIA ವಶಕ್ಕೆ ನೀಡಿ ಆದೇಶಿಸಿದ್ದಾರೆ. ಈ ಇಬ್ಬರು ಉಗ್ರರನ್ನ ಕೊಲ್ಕತ್ತಾದಿಂದ ಬೆಂಗಳೂರಿಗೆ ಕರೆತಂದಿರೋ NIA ಅಧಿಕಾರಿಗಳು, ಮಡಿವಾಳದ ಇಂಟ್ರಾಗೇಷನ್‌ ಸೆಲ್‌ನಲ್ಲಿ ವಿಚಾರಣೆ ನಡೆಸಿದ್ರು. ಬಳಿಕ ಕೋರಮಂಗಲದ ರಾಷ್ಟ್ರೀಯ ಕ್ರೀಡಾ ಗ್ರಾಮ ಸಮುಚ್ಚಯದಲ್ಲಿರೋ ನ್ಯಾಯಾಧೀಶರ ನಿವಾಸದಲ್ಲಿ, ಅವರ ಸಮ್ಮುಖದಲ್ಲಿ ಹಾಜರುಪಡಿಸಿದ್ರು. ಈ ವೇಳೆ ನ್ಯಾಯಾಧೀಶರು ಉಗ್ರರನ್ನ 10 ದಿನಗಳ ಕಾಲ ಎನ್​ಐಎ ಕಸ್ಟಡಿಗೆ ನೀಡಿ ಆದೇಶಿಸಿದ್ದಾರೆ. ಇನ್ನು ಉಗ್ರ ಅಬ್ದುಲ್‌ ಮತೀನ್‌ ತಾಹಾನ ತಂದೆ ಮನ್ಸೂರ್‌, 22 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಯೋಧನಾಗಿ ಸೇವೆ ಸಲ್ಲಿಸಿದ್ರು ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply