ಕಾಂಬೋಡಿಯಾ ಜಾಬ್‌ ಸ್ಕ್ಯಾಮ್‌! 250 ಭಾರತೀಯರ ರಕ್ಷಣೆ!

masthmagaa.com:

ಕಾಂಬೋಡಿಯಾದಲ್ಲಿ ಒಳ್ಳೆ ಜಾಬ್‌ ಕೊಡಿಸ್ತೀವಿ… ಚೆನ್ನಾಗಿ ಸ್ಯಾಲರಿ ಸಿಗುತ್ತೆ ಅಂತ ಆಮಿಷ ಒಡ್ಡಿ ಭಾರತೀಯರು ಮೋಸ ಹೋಗ್ತಿರೋ ಬಗ್ಗೆ ಭಾರತೀಯ ವಿದೇಶಾಂಗ ಸಚಿವಾಲಯ ರಿಯಾಕ್ಟ್‌ ಮಾಡಿದೆ. ʻಈ ರೀತಿ ಮೋಸ ಮಾಡಿ ಭಾರತೀಯರನ್ನ ಬಲವಂತವಾಗಿ ಅಲ್ಲಿನ ಅಕ್ರಮ ಸೈಬರ್‌ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾಗ್ತಿದೆ. ಈ ಬಗ್ಗೆ ಸಾಕಷ್ಟು ಕಂಪ್ಲೈಂಟ್‌ಗಳು ಬಂದಿವೆʼ ಅಂತ ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್‌ ಜೈಸ್ವಾಲ್‌ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ದೇ ʻಇದೀಗ ಸುಮಾರು 250 ಭಾರತೀಯರನ್ನ ಈ ಜಾಬ್‌ ಸ್ಕ್ಯಾಮ್‌ನಿಂದ ರಕ್ಷಣೆ ಮಾಡಿ ವಾಪಾಸ್‌ ಭಾರತಕ್ಕೆ ಕರೆತರಲಾಗಿದೆ. ಕೇವಲ ಕಳೆದ ಮೂರೇ ಮೂರು ತಿಂಗಳಲ್ಲಿ 75 ಭಾರತೀಯರನ್ನ ವಾಪಾಸ್‌ ಕರೆಸಲಾಗಿದೆʼ ಅಂದಿದ್ದಾರೆ.

-masthmagaa.com

Contact Us for Advertisement

Leave a Reply