ಹ್ಯಾಕರ್​​ಗಳ ವೆಬ್​ಸೈಟೇ ಹ್ಯಾಕ್ ಮಾಡಿದ ಸೈಬರ್​ಕೋರರು!

masthmagaa.com:

ಇಷ್ಟು ದಿನ ವಿವಿಧ ಸಂಸ್ಥೆಗಳ ವೆಬ್​ಸೈಟ್​​ಗಳನ್ನು ಹ್ಯಾಕ್ ಮಾಡಿ ಕಾಟ ಕೊಡ್ತಿದ್ದ ರಿವಿಲ್ ಅನ್ನೋ ಸೈಬರ್ ದಾಳಿಕೋರ ಗುಂಪೇ ಈಗ ಹ್ಯಾಕರ್​​ಗಳಿಗೆ ಶಿಕಾರಿಯಾಗಿದೆ. ಹಲವು ದೇಶಗಳನ್ನು ಇದ್ರ ಕಾರ್ಯಾಚರಣೆ ಈಗ ಫುಲ್ ಬಂದ್ ಆಗೋಗಿದೆ. ಸೈಬರ್ ದಾಳಿಗೆ ಒಳಗಾದ ಸಂತ್ರಸ್ಥರ ದಾಖಲೆಗಳನ್ನು ಲೀಕ್ ಮಾಡ್ತಿದ್ದ ರಿವಿಲ್ ಗ್ರೂಪ್​​ನ ವೆಬ್​ಸೈಟ್​ ಹ್ಯಾಪಿ ಬ್ಲಾಗ್ ಈಗ ಅಂತರ್ಜಾಲದಲ್ಲಿ ಲಭ್ಯವೇ ಇಲ್ಲದಂತಾಗಿದೆ. ರಷ್ಯಾ ಮೂಲದ ಈ ಸೈಬರ್ ದಾಳಿಕೋರ ಗುಂಪಿಗೆ ಶಿಕಾರಿಯಾಗಿದ್ದವರು ಒಬ್ಬಿರಬ್ಬರಲ್ಲ.. ಕಳೆದ ಮೇ ತಿಂಗಳಲ್ಲಿ ಕೊಲೊನಿಯಲ್ ಪೈಪ್​ಲೈನ್ ಅನ್ನೋ ಗ್ಯಾಸ್ ಸರಬರಾಜು ಸಂಸ್ಥೆಯ ಮೇಲೆ ದಾಳಿ ನಡೆಸಿದ್ದ ಈ ಗ್ರೂಪ್​​, ಅಮೆರಿಕದ ಪೂರ್ವ ತೀರದಲ್ಲಿ ಅನಿಲ ಪೂರೈಕೆ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸಿತ್ತು. ಹೀಗೆ ಹ್ಯಾಕ್ ಮಾಡಿ ವಿವಿಧ ಕಂಪನಿಗಳ ಬಳಿ ದುಡ್ಡು ಸುಲಿಗೆ ಮಾಡ್ತಿದ್ದ ಕಿರಾಕತರು ಈಗ ತಾವೇ ಹ್ಯಾಕ್ ಆಗಿದ್ದಾರೆ.

-masthmagaa.com

Contact Us for Advertisement

Leave a Reply