ಡಿಜಿಟಲ್‌ ಪೈರಸಿ ಕೇಸ್‌ ಪೊಲೀಸ್‌ ಮುಂದೆ ಹಾಜರಾದ ಬಾಲಿವುಡ್‌ ರ‍್ಯಾಪ್‌ ಸಿಂಗರ್‌ ಬಾದ್‌ಶಾ!

masthmagaa.com:

ಮಹಾದೇವ್‌ ಬೆಟ್ಟಿಂಗ್‌ ಆ್ಯಪ್‌ಗೆ ಸಂಬಂಧಿಸಿದ ಫೇರ್‌ ಪ್ಲೇ ಆ್ಯಪ್‌ನಲ್ಲಿ IPL ಪ್ರಮೋಟ್‌ ಮಾಡಿದ್ದ ಕೇಸ್‌ನಲ್ಲಿ ಬಾಲಿವುಡ್‌ ರ‍್ಯಾಪ್‌ ಸಿಂಗರ್‌ ಬಾದ್‌ಷಾ ಇಂದು ಸೈಬರ್‌ ಕಚೇರಿಗೆ ಹಾಜರಾಗಿದ್ದಾರೆ. ಅಂದ್ಹಾಗೆ ಕಳೆದ IPLನ ಪ್ರಸಾರ ಹಕ್ಕುಗಳನ್ನ ಅಂಬಾನಿ ಒಡೆತನದ ವಯಾಕಾಮ್18‌ ಚಾನೆಲ್‌ ಹೊಂದಿತ್ತು. ಆದ್ರೆ ʻಫೇರ್‌ ಪ್ಲೇʼ ಆ್ಯಪ್‌ನಲ್ಲಿ ಅಕ್ರಮವಾಗಿ IPL ಪಂದ್ಯಗಳನ್ನ ಸ್ಟ್ರೀಮ್‌ ಮಾಡಲಾಗಿತ್ತು. ಅಲ್ದೇ ಬಾದ್‌ಶಾ, ಸಂಜಯ್‌ದತ್‌ ಸೇರಿದಂತೆ 40 ನಟ-ನಟಿಯರು ಇದರ ಪ್ರಮೋಶನ್‌ ಕೂಡ ಮಾಡಿದ್ರು. ಈ ಕುರಿತು ವಯಾಕಾಮ್18‌ ನೀಡಿದ ದೂರಿನ ಬೆನ್ನಲ್ಲೆ ಮುಂಬೈ ಸೈಬರ್‌ ಪೊಲೀಸರು ಬಾದ್‌ಶಾರನ್ನ ಇಂದು ವಿಚಾರಣೆ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply