ಹೋಟೆಲ್‌ನಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ, ವಿಜಯ್‌ ದೇವರಕೊಂಡ!

masthmagaa.com:

ಸ್ನೇಹಿತರೇ ವಿಜಯ್‌ ದೇವರಕೊಂಡ ಅಂದ್ರೆ ಸಾಮಾನ್ಯವಾಗಿ ಎಲ್ಲರೂ ಇಷ್ಟ ಪಡುವಂತ ನಟ. ಅದರಲ್ಲೂ ಹುಡುಗೀರಿಗಂತು ಇವರು ಹಾಟ್‌ ಫೆವರೇಟ್‌ ಅಂತಾನೇ ಹೇಳಬೋದು. ಬಾಲಿವುಡ್‌ನ ಸಾರಾ ಅಲಿ ಖಾನ್‌, ಜಾನ್ವಿ ಕಫೂರ್‌, ಅನನ್ಯ ಪಾಂಡೆಗೂ ಸಹ ವಿಜಯ್‌ ದೇವರಕೊಂಡ ಫೇವರೇಟ್‌ ಅಂತ ಕಾಫಿ ವಿತ್‌ ಕರಣ್‌ ಶೋ ನಲ್ಲಿ ಹೇಳಿದ್ದಾರೆ. ಇನ್ನು ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ಅವರ ಡೇಟಿಂಗ್‌ವಿಚಾರಕ್ಕೆ ಬರೋದಾದ್ರೆ, ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ನಾವಿಬ್ಬರೂ ಒಳ್ಳೆ ಫ್ರೆಂಡ್ಸ್‌ ಅಂತ ಹೇಳಿದ್ರೂ ಅವರ ಅಭಿಮಾನಿಗಳು ಮಾತ್ರ ಈ ಮಾತನ್ನ ನಂಬೋದಿಲ್ಲ.

ಗೀತಾ ಗೋವಿಂದಂ ಮೂವಿ ಬಂದಾಗಿಂದಲೂ ಎಲ್ಲರಿಗೂ ಡೌಟ್‌ ಇದೆ ಈ ಜೋಡಿ ಡೇಟ್‌ ಮಾಡ್ತಾ ಇದಾರೆ ಅಂತ. ಇದಕ್ಕೆ ಸಾಕ್ಷಿ ಎಂಬಂತೆ ಹಲವಾರು ಬಾರಿ ಈ ಜೋಡಿ ಒಟ್ಟಿಗೆ ಟ್ರಿಪ್‌ ಕೂಡ ಮಾಡ್ತಾರೆ. ಈ ಹಿಂದೆ ನ್ಯೂ ಇಯರ್‌ ಸೆಲೆಬ್ರೇಷನ್‌ ಅಂತ ವಿಜಯ್‌ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಪೋಸ್ಟ್‌ ಮಾಡಿದ ಎರಡೂ ಪೋಸ್ಟ್‌ಗಳಲ್ಲೂ ಒಂದೇ ಬ್ಯಾಕ್‌ಗ್ರೌಂಡ್‌ ಇತ್ತು. ಅಷ್ಟೇ ಅಲ್ಲ ರಶ್ಮಿಕಾ ಅಭಿಮಾನಿಗಳ ಜೊತೆ ಮಾತಾಡೋಕೆ ಅಂತ ಲೈವ್‌ ಬಂದಾಗ ಬ್ಯಾಕ್‌ಗ್ರೌಂಡ್‌ ವಾಯ್ಸ್‌ ಮಾತ್ರ ವಿಜಯ್‌ ದೇವರಕೊಂಡ ಅವರದ್ದು ಇತ್ತು. ಇದನ್ನೆಲ್ಲಾ ಮ್ಯಾಚ್‌ ಮಾಡಿ ಅಭಿಮಾನಿಗಳು ಫಿಕ್ಸ್‌ ಆಗಿ ಬಿಟ್ಟಿದ್ದಾರೆ. ರಶ್ಮಿಕಾ ಮತ್ತು ವಿಜಯ್‌ ದೇವಕೊಂಡ ಜೋಡಿ ಅಂತ.

ಇದೇ ರೂಮರ್ಸ್‌ಗೆ ಸಾಕ್ಷಿ ಎಂಬಂತೆ ರಶ್ಮಿಕಾ ಮಂದಣ್ಣ, ವಿಜಯ್‌ ದೇವರಕೊಂಡ ಅವರ ಫ್ರೆಂಡ್ಸ್‌ ಹಾಗೂ ಫ್ಯಾಮಿಲಿ ಊಟ ಹೊಟೇಲ್‌ಗೆ ವಿಸಿಟ್‌ ಕೊಟ್ಟ ಇನ್ನೊಂದು ವಿಡಿಯೋ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ರಶ್ಮಿಕಾ, ವಿಜಯ್‌ ದೇವರಕೊಂಡ ಅವರ ಫ್ರೆಂಡ್ಸ್‌ ಮತ್ತು ಫ್ಯಾಮಿಲಿ ಕೂಡ ಇದೆ. ಈ ವಿಡಿಯೋ ನೋಡಿ ಅವರ ಅಭಿಮಾನಿಗಳಿಗೆ ತುಂಬಾನೇ ಖುಷಿ ಆಗಿದೆ. ಅಂತೂ ಈ ಜೋಡಿ ಮದ್ವೆ ಆಗ್ತಾರೆ ಅಂತ ಕಾಮೆಂಟ್‌ ಮಾಡ್ತಾ ಇದಾರೆ. ಅದರಲ್ಲೂ ಈ ವಿಡಿಯೋನ ಅಭಿಮಾನಿಯೊಬ್ರು ತಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ಶೇರ್‌ ಮಾಡಿ, ಇನ್ನು ಮುಂದೆ ಹೈಡ್‌ ಮಾಡಬೇಡಿ ಅಂತ ರಿಕ್ವೆಸ್ಟ್‌ ಮಾಡಿಕೊಂಡಿದ್ದಾರೆ.

ಆದ್ರೆ ರಶ್ಮಿಕಾ ಮತ್ತೆ ವಿಜಯ್‌ ದೇವರಕೊಂಡ ಮಾತ್ರ ಇದನ್ನ ಒಪ್ತಾ ಇಲ್ಲ. ಒಂದು ಬಾರಿ ರಶ್ಮಿಕಾ ಅವ್ರೇ ಇದರ ಬಗ್ಗೆ ಕ್ಲಾರಿಟಿ ಕೊಟ್ಟಿದ್ರು. ನಾವ್‌ ಇಬ್ರು ಒಳ್ಳೇ ಫ್ರೆಂಡ್ಸ್‌, ಯಾಕೆ ಫ್ರೆಂಡ್ಸ್‌ ಎಲ್ಲೂ ಟ್ರಿಪ್‌ ಹೋಗಬಾರದಾ ? ಅಂತ ಪ್ರಶ್ನೆ ಮಾಡಿದ್ರು. ರಶ್ಮಿಕಾ ಮತ್ತು ವಿಜಯ್‌ ಡೇಟ್‌ ಮಾಡ್ತಾ ಇದಾರೆ ಅನ್ನೋ ರೂಮರ್ಸ್‌ ಸಿಕ್ಕಾಪಟ್ಟೆ ಸ್ಪ್ರೆಡ್‌ ಆದಾಗ್ಲೂ ರಶ್ಮಿಕಾ ಅದಕ್ಕೆ ಕ್ಲಾರಿಟಿ ಕೊಟ್ಟಿದ್ರು. “ನನಗೆ ಗೊತ್ತಿದೆ, ನಾವಿಬ್ರು ಸೆಲೆಬ್ರಿಟಿ ಆಗಿದ್ರಿಂದ ಜನರಿಗೆ ನಮ್ಮ ಬಗ್ಗೆ ತಿಳಿದುಕೊಳ್ಳೋಕೆ ತುಂಬಾನೇ ಇಂಟ್ರೆಸ್ಟ್‌ ಇರತ್ತೆ. ವಿಜಯ್‌ ತುಂಬಾನೇ ಕ್ಯೂಟ್‌ ಇದಾರೆ. ನಾನು ಕೂಡ ಕೆಲವೊಂದು ಟ್ರೋಲ್‌ಗಳನ್ನ ನೋಡಿದ್ದೇನೆ. ಆದ್ರೆ ಇದರ ಬಗ್ಗೆ ನಾನು ವಿಜಯ್‌ ಯಾವತ್ತು ಡಿಸ್‌ಕಸ್‌ ಮಾಡ್ಲಿಲ್ಲ. ನಮ್ದು ಟೋಟಲ್‌ ಆಗಿ 15 ಜನರ ಒಂದು ಗ್ಯಾಂಗ್‌ ಇದೆ. ನಮಗೆ ಟೈಮ್‌ ಸಿಕ್ಕಾಗೆಲ್ಲಾ ಗೇಮ್ಸ್‌ ಆಡ್ತೀವಿ, ಎಂಜಾಯ್‌ ಮಾಡ್ತೀವಿ ಅಷ್ಟೇ. ನಮಗೆ ನಮ್ಮ ಫ್ರೆಂಡ್‌ಶಿಪ್‌ ಮುಖ್ಯ ಅದ್ರ ಬಗ್ಗೆ ಅಷ್ಟೇ ನಾವು ಯೋಚನೆ ಮಾಡ್ತೀವಿ” ಅಂತ ಹೇಳಿದ್ರು.

ಇನ್ನೂ ಈ ಜೋಡಿ ಆಫಿಷಿಯಲ್‌ ಆಗಿ ಅನೌನ್ಸ್‌ ಮಾಡೋ ತನಕ ಕಾಯಬೇಕು ಅಷ್ಟೇ

-masthmagaa.com

Contact Us for Advertisement

Leave a Reply