‘ರೈನ್​​ಬೋ’ ವಿಶೇಷ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ!

masthmagaa.com:

ನಟಿ ರಶ್ಮಿಕಾ ಮಂದಣ್ಣ ಅವರು ಬೇಡಿಕೆಯ ನಟಿಯಾಗಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಈಗ ರಶ್ಮಿಕಾ ತೆಲುಗಿನಲ್ಲಿ ಬ್ಯಾಕ್​ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ರಶ್ಮಿಕಾ ಅವರು ನಿತೀನ್ ಜೊತೆ ಸಿನಿಮಾ ಮಾಡುವ ಘೋಷಣೆ ಮಾಡಿದ್ದರು. ಚಿರಂಜೀವಿ ಅವರು ಈ ಸಿನಿಮಾದ ಮುಹೂರ್ತಕ್ಕೆ ಬಂದು ವಿಶ್ ಮಾಡಿದ್ದರು. ಈಗ ರಶ್ಮಿಕಾ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಇದಕ್ಕೆ ‘ರೈನ್​​ಬೋ’ ಎನ್ನುವ ಶೀರ್ಷಿಕೆ ಇಡಲಾಗಿದೆ. ಇದು ಮಹಿಳಾ ಪ್ರಧಾನ ಸಿನಿಮಾ ಆಗಿರಲಿದೆ. ಶಾಂತರುಬಾನ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಲಿದ್ದಾರೆ. ರಶ್ಮಿಕಾ ಮಂದಣ್ಣ ಅವರ 22 ಸಿನಿಮಾ ಇದಾಗಿದೆ.

-masthmagaa.com

Contact Us for Advertisement

Leave a Reply