ವದಂತಿಗಳಿಗೆ ತೆರೆ ಎಳೆದ ರಶ್ಮಿಕಾ ಮಂದಣ್ಣ ಮ್ಯಾನೇಜರ್‌!

masthmagaa.com:

ಇತ್ತೀಚಿಗೆ ರಶ್ಮಿಕಾ ಮಂದಣ್ಣ ಅವರ ಮ್ಯಾನೇಜರ್‌ ರಶ್ಮಿಕಾಗೆ ಮೋಸ ಮಾಡಿದ್ರು. ರಶ್ಮಿಕಾಗೆ ಗೊತ್ತಿಲ್ಲದ ಹಾಗೇ ರಶ್ಮಿಕಾರ ದುಡ್ಡನ್ನ ಬಳಸಿಕೋಳ್ತಾ ಇದ್ರು, ಹಾಗಾಗಿ ರಶ್ಮಿಕಾ ತನ್ನ ಮ್ಯಾನೇಜರ್‌ ಅನ್ನ ಕೆಲಸದಿಂದ ತೆಗೆದುಹಾಕಿದ್ದಾರೆ ಅಂತೆಲ್ಲಾ ಸುದ್ದಿ ಆಗಿತ್ತು. ಆದರೆ ಈಗ ಆ ವಿಷಯಕ್ಕೆ ಒಂದು ಟ್ವಿಸ್ಟ್‌ ಸಿಕ್ಕಿದೆ. ರಶ್ಮಿಕಾ ಮ್ಯಾನೇಜರ್‌ ಈಗ ಹಬ್ಬುತ್ತಾ ಇರುವ ವದಂತಿಗಳ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ.

“ನನ್ನ ಮತ್ತು ರಶ್ಮಿಕಾ ನಡುವೆ ಯಾವುದೇ ದ್ವೇಷ ಇಲ್ಲ. ನಾನು ರಶ್ಮಿಕಾ ಅವರ ಜೊತೆ ಮಾತಾಡಿಕೊಂಡೇ ಕೆಲಸ ಬಿಟ್ಟಿದ್ದೀನಿ. ನಾವಿಬ್ಬರೂ ಕೆಲಸದಲ್ಲಿ ಮುಂದುವರೆಯಲು ಮತ್ತು ಸ್ವತಂತ್ರವಾಗಿ ಕೆಲಸ ಮಾಡಲು ಈ ನಿರ್ಧಾರ ಮಾಡಿದೀನಿ, ಹಾಗಾಗಿ ಕೆಲಸ ಬಿಡಬೇಕಾಯಿತು” ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply