ಐಪಿಎಲ್‌ ಉದ್ಘಾಟನೆಯಲ್ಲಿ ಸೊಂಟ ಬಳುಕಿಸಲು ರೆಡಿಯಾದ ರಶ್ಮಿಕಾ, ತಮನ್ನಾ!

masthmagaa.com:

ಕ್ರಿಕೆಟ್‌ ಪ್ರೇಮಿಗಳು ಬಹಳ ದಿನಗಳಿಂದ ಕಾಯುತ್ತಿದ್ದ ದಿನ ಬಂದಿದೆ. ಮಾರ್ಚ್‌ 31ರಿಂದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆರಂಭವಾಗುತ್ತಿದೆ. ಇಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್‌ ಉದ್ಘಾಟನಾ ಸಮಾರಂಭ ನಡೆಯುತ್ತಿದೆ. ಇನ್ನೂ ಈ ಐಪಿಎಲ್‌ ನಲ್ಲಿ ನ್ಯಾಷನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ ಮತ್ತು ಮಿಲ್ಕಿ ಬ್ಯೂಟಿ ತಮನ್ನ ಡ್ಯಾನ್ಸ್‌ ಮಾಡಲಿದ್ದಾರೆ. ಅಭಿಮಾನಿಗಳು ರಶ್ಮಿಕಾ ಹಾಗೂ ತಮನ್ನಾ ಡ್ಯಾನ್ಸ್‌ ನೋಡಲು ಕಾಯುತ್ತಿದ್ದಾರೆ. Indian Premier League ತನ್ನ ಅಧಿಕೃತ ಟ್ಟಿಟ್ಟರ್‌ ಖಾತೆಯಲ್ಲಿ ಈ ವಿಷಯವನ್ನ ಶೇರ್‌ ಮಾಡಿಕೊಂಡಿದೆ. ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಸಂಜೆ 7.30ಕ್ಕೆ ಮೊದಲ ಪಂದ್ಯ ಆರಂಭವಾಗಲಿದೆ. ಇದಕ್ಕೂ ಮುನ್ನ ಸಂಜೆ 6 ಗಂಟೆಗೆ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಖ್ಯಾತ ನಟಿಯರಾದ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣನವರ ಡ್ಯಾನ್ಸ್‌ ಪರ್ಫಾಮೆನ್ಸ್‌ ನಡೆಯಲಿದೆ.

-masthmagaa.com

Contact Us for Advertisement

Leave a Reply