ಕಲಾವಿದರಿಗೆ ಫುಡ್ ಕಿಟ್ ಕೊಟ್ಟು ಅವಮಾನ ಮಾಡಬೇಡಿ, ಅದರ ಬದಲು ಕೆಲಸ ಮಾಡಲು ಬಿಡಿ: ವಿ ರವಿಚಂದ್ರನ್!

masthmagaa.com:

ಕೋರೋನ ಸಮಯದಲ್ಲಿ ಚಿತ್ರರಂಗದ ಸ್ಥಿತಿಗತಿಗಳ ಬಗ್ಗೆ ಮಾತನಾಡಿರುವ ವಿ ರವಿಚಂದ್ರನ್, ಕನ್ನಡ ಸಿನಿಮಾರಂಗಕ್ಕೆ ಬೇಕಿರುವುದು ಫುಡ್ ಕಿಟ್ ಅಲ್ಲ ಬದಲಿಗೆ ಕೆಲಸ ಎಂದು ಹೇಳಿದ್ದಾರೆ, ಕೆಲವು ಜನ ಕಷ್ಟ ಪಡುತ್ತಿರುವುದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ, ಆದರೆ ಅವರಿಗೆ ಕೆಲಸ ಬೇಕಾಗಿದೆ. ಫುಡ್ ಕಿಟ್ ನೀಡುವ ಮೂಲಕ ಅವರಿಗೆ ಅವಮಾನ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.ಇದಕ್ಕೂ ಮಿಗಿಲಾಗೆ ಕೆಲವರು ಪಬ್ಲಿಸಿಟಿಗಾಗಿ ಈ ಕೆಲಸ ಮಾಡುತ್ತಿದ್ದಾರೆ. ಇದೆಲ್ಲಾ ಕಣ್ಣೊರೆಸುವ ತಂತ್ರವಾಗಿದೆ,  ನಿಮಗೆ ದಾನ ಮಾಡುವ ಮನಸ್ಸಿದ್ದರೇ ಅದನ್ನು ಪಬ್ಲಿಸಿಟಿ ಮಾಡುವುದೇಕೆ ಎಂದು ಪ್ರಶ್ನಿಸಿದ್ದಾರೆ.

ಲಾಕ್‌ಡೌನ್ ಅನ್ನು ಏಪ್ರಿಲ್‌ನಲ್ಲಿ ಮೊದಲೇ ಜಾರಿಗೊಳಿಸಬೇಕಾಗಿತ್ತು. ಜನರು ಮನೆಯೊಳಗೆ ಇರಬೇಕೆಂದು ಸರ್ಕಾರ ಬಯಸಿದರೆ, ಅವರು ಅಗತ್ಯವಿರುವವರಿಗೆ ಸಹಾಯ ಮಾಡಲು ಹೊರಡಬೇಕು. ಮತಕ್ಕಾಗಿ ಹಣ ನೀಡಲು ಬರುವ ರಾಜಕಾರಣಿಗಳಿಗೆ ಈಗ ಏಕೆ ಬರಲು ಆಗುತ್ತಿಲ್ಲ ಎಂದು ಪ್ರಶ್ನಿಸಿರುವ ರವಿಚಂದ್ರನ್ ನಾನು ಕೂಡ ಒಬ್ಬ ವ್ಯಕ್ತಿ, ಬೇರೆ ಇಂಡಸ್ಟ್ರಿಗಳ ರೀತಿ ಸಿನಿಮಾ ರಂಗವೂ ಹೋರಾಟ ನಡೆಸುತ್ತಿದೆ,ಒಂದು ವೇಳೆ ನನ್ನ ಕೈಯ್ಯಲ್ಲಿ ಒಂದು ರೂಪಾಯಿ ಸಿಕ್ಕರೆ ನಾಳೆಯೇ ಶೂಟಿಂಗ್ ಆರಂಭಿಸುತ್ತೇನೆ, ಲಾಕ್ ಡೌನ್ ಎಲ್ಲವನ್ನು ತಡೆಹಿಡಿದಿದೆ ಎಂದು ತಿಳಿಸಿದ್ದಾರೆ.

-masthmagaa.com
Contact Us for Advertisement

Leave a Reply