RRR ಸಿನಿಮಾದ ಖಳನಾಯಕ ರೇ ಸ್ಟೀವನ್ಸನ್ ನಿಧನ!

masthmagaa.com:

ಎಸ್‌. ಎಸ್‌ ರಾಜಮೌಳಿ ನಿರ್ದೇಶನದ RRR ಸಿನಿಮಾದಲ್ಲಿ ನಟಿಸಿದ್ದ ವಿಲನ್‌ ಪಾತ್ರದಾರಿ ಕೊನೆಯುಸಿರೆಳೆದಿದ್ದಾರೆ. RRR ಸಿನಿಮಾದಲ್ಲಿ ಗವರ್ನರ್‌ ಪಾತ್ರದಲ್ಲಿ ಮಿಂಚಿದ್ದ ನಟ ರೇ ಸ್ಟೀವನ್ಸನ್ ಭಾನುವಾರ (ಮೇ 21)ಮೃತ ಪಟ್ಟಿದ್ದಾರೆ. ಇವರ ಸಾವಿಗೆ ಇದುವರೆಗೆ ಯಾವುದೇ ಕಾರಣ ತಿಳಿದುಬಂದಿಲ್ಲ.

ಇವರ ಸಾವಿಗೆ ಎಸ್‌ ಎಸ್‌ ರಾಜಮೌಳಿ ಸಂತಾಪ ಸೂಚಿಸಿದ್ದಾರೆ. “ಇಡೀ ತಂಡಕ್ಕೆ ಶಕ್ತಿ ತುಂಬ್ತಾ ಇದ್ರು. ಆಕಸ್ಮಿಕವಾದ ಇವರ ನಿಧನದ ಸುದ್ದಿಯಿಂದ ನಾನು ಶಾಕ್‌ ಆಗಿದ್ದೀನಿ. ಅವರ ಕುಟುಂಬಕ್ಕೆ ದೇವರು ನೋವನ್ನ ಭರಿಸುವ ಶಕ್ತಿ ಕೊಡಲಿ, ಅವರ ಆತ್ಮಕ್ಕೆ ಶಾಂತಿ ಸಿಗಲಿ” ಅಂತ ತಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ಬರೆದುಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply