ಬಿಎಸ್‍ವೈ ಮುಗಿಸಲು ಸಂಚು: ಆರ್.ಬಿ.ತಿಮ್ಮಾಪುರ ಬಾಂಬ್

ಬಿಜೆಪಿಯಲ್ಲಿ ಇಬ್ಬರು ಸೇರಿಕೊಂಡು ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಂಚು ಮಾಡುತ್ತಿದ್ದಾರೆ ಅಂತ ಆರ್.ಬಿ ತಿಮ್ಮಾಪುರ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ನಳಿನ್ ಕುಮಾರ್ ಕಟೀಲ್ ಮತ್ತು ಬಿ.ಎಲ್.ಸಂತೋಷ್ ಸೇರಿಕೊಂಡು ಲಿಂಗಾಯತ ನಾಯಕ ಯಡಿಯೂರಪ್ಪರನ್ನು ಮುಗಿಸಲು ನೋಡ್ತಿದ್ದಾರೆ. ನಳಿನ ಕುಮಾರ್ ಕಟೀಲ್‍ಗೆ ಉತ್ತರ ಕರ್ನಾಟಕ ಜನ ಪರಿಚಯವೇ ಇಲ್ಲ. ಉತ್ತರದ ಜನ ಯಡಿಯೂರಪ್ಪ ಮುಖ ನೋಡಿಕೊಂಡು ಬಿಜೆಪಿಗೆ ಓಟ್ ಹಾಕಿದ್ದಾರೆ. ಅಲ್ಲದೆ ಬಹುಮತವಿಲ್ಲದ ಸರ್ಕಾರವನ್ನು ಅಧಿಕಾರಕ್ಕೆ ತರಲು ಕಷ್ಟಪಟ್ಟಿದ್ದಾರೆ. ಆದ್ರೆ ಜನರ ಆಶೀರ್ವಾದ ಪಡೆಯದ ಕೆಲವರು ಬಿಜೆಪಿಯಲ್ಲಿ ಕೂತಿದ್ದಾರೆ. ಇವರ ನಡುವೆ ಸಿಲುಕಿ ಬಿ.ಎಸ್.ಯಡಿಯೂರಪ್ಪ ಅಸಹಾಯಕರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

Contact Us for Advertisement

Leave a Reply