ಇನ್ಮೇಲೆ ಕ್ರೆಡಿಟ್‌ ಕಾರ್ಡ್‌ ನೆಟ್‌ವರ್ಕ್‌ನ್ನ ಸೆಲೆಕ್ಟ್ ಮಾಡ್ಕೋಬೋದು!

masthmagaa.com:

RBI ಕ್ರೆಡಿಟ್‌ ಕಾರ್ಡ್‌ ಸೇವೆಗಳನ್ನ ಇಂಪ್ರೂವ್‌ ಮಾಡೋಕೆ ಹೊಸ ನಿಯಮವೊಂದನ್ನ ತಂದಿದೆ. ಕ್ರೆಡಿಟ್‌ ಕಾರ್ಡ್‌‌ ನೆಟ್‌ವರ್ಕ್‌ ಕಂಪನಿಗಳ ಜೊತೆ ಟೈ ಅಪ್‌ ಮಾಡ್ಕೊಂಡಿರೋ ಬ್ಯಾಂಕ್‌ ಹಾಗೂ ಬ್ಯಾಂಕೇತರ ಸಂಸ್ಥೆಗಳಿಗೆ ಹೊಸ ಆದೇಶ ನೀಡಿದೆ. ಅದೇನಂದ್ರೆ ಕೆಲವು ಕಾರ್ಡ್‌ ನೆಟ್‌ವರ್ಕ್‌ಗಳು.. ಫಾರ್‌ ಎಕ್ಸಾಂಪಲ್‌ ಮಾಸ್ಟರ್‌ ಕಾರ್ಡ್‌, ವೀಸಾದಂತ ನೆಟ್‌ವರ್ಕ್‌ಗಳು, ತಾವು ಟೈ ಅಪ್‌ ಮಾಡ್ಕೊಂಡಿರೋ ಬ್ಯಾಕ್‌ಗಳಿಗೆ ಬೇರೆ ಕಂಪನಿಗಳ ನೆಟ್‌ವರ್ಕ್‌ ಬಳಸೋ ಹಾಗಿಲ್ಲ ಅಂತ ಕಂಡೀಶನ್‌ ಹಾಕ್ತಿದ್ವು. ಆ ರೀತಿ ಒಪ್ಪಂದ ಮಾಡ್ಕೊಳ್ತಿದ್ವು. ಇದ್ರಿಂದ ಗ್ರಾಹಕರಿಗೆ ಹೆಚ್ಚಿನ ಆಪ್ಶನ್‌ಗಳಿರ್ತಿರ್ಲಿಲ್ಲ. ಇದೀಗ ಕಾರ್ಡ್‌ ವಿತರಕರು ಅಂದ್ರೆ ಬೇಸಿಕಲಿ ಬ್ಯಾಂಕುಗಳು ಅಂತಾ ಅಗ್ರೀಮೆಂಟ್‌ಗಳನ್ನ ಮಾಡ್ಕೊಬಾರ್ದು ಅಂತ RBI ಹೇಳಿದೆ. ಸೋ ಇನ್ಮೇಲೆ ನೀವು ಕ್ರೆಡಿಟ್‌ ಕಾರ್ಡ್‌ ತಗೋಳುವಾಗ ನಿಮಗೆ ಯಾವ ನೆಟ್‌ವರ್ಕ್‌ನ ಕಾರ್ಡ್‌ ಬೇಕು ಅಂತ ಸೆಲೆಕ್ಟ್ ಮಾಡ್ಕೋಬೋದು. ಈಗ ಆಲ್ರೆಡಿ ಕ್ರೆಡಿಟ್‌ ಕಾರ್ಡ್‌ ಇರೋರು ನೆಕ್ಸ್ಟ್‌ ರಿನೀವಲ್‌ ಮಾಡ್ಸೋ ಟೈಮಲ್ಲಿ ನಿಮ್ಮ ನೆಟ್‌ವರ್ಕ್‌ ಚೇಂಜ್‌ ಮಾಡ್ಕೋಬೋದು.

-masthmagaa.com

Contact Us for Advertisement

Leave a Reply