ಅಮೆರಿಕ ಡಿಫೆನ್ಸ್​ ಸೆಕ್ರೆಟರಿ ಲಾಯ್ಡ್​ ಆಸ್ಟಿನ್ ಸೌದಿ ಪ್ರಿನ್ಸ್​​ ಮಾತುಕತೆ!

masthmagaa.com:

ಅಮೆರಿಕ ಡಿಫೆನ್ಸ್​ ಸೆಕ್ರೆಟರಿ ಲಾಯ್ಡ್​ ಆಸ್ಟಿನ್ ಸೌದಿ ಯುವರಾಜ ಮೊಹ್ಮದ್ ಬಿನ್ ಸಲ್ಮಾನ್​​ ಜೊತೆ ರಾಷ್ಟ್ರೀಯ ಭದ್ರತೆ ಬಗ್ಗೆ ಮಾತುಕತೆ ನಡೆಸಿದ್ದಾರೆ. ಜೊತೆಗೆ ಇದೇ ವೇಳೆ ಸೌದಿ ಮತ್ತು ಅದರ ಪ್ರಜೆಗಳನ್ನು ರಕ್ಷಿಸಲು ಎಲ್ಲಾ ರೀತಿಯ ಸಹಾಯ ನೀಡಲು ಸಿದ್ಧ ಅಂತ ಭವರಸೆ ನೀಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಯೆಮನ್ ಸಂಘರ್ಷವನ್ನು ಅಂತ್ಯಗೊಳಿಸೋ ಬಗ್ಗೆ ಚರ್ಚೆ ನಡೆಸಿದ್ದಾರೆ ಅಂತ ಪೆಂಟಗಾನ್ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ. ಉತ್ತರ ಯೆಮನ್​​ನ ಬಹುಭಾಗವನ್ನು 2014ರಿಂದಲೇ ಇರಾನ್ ಬೆಂಬಲಿತ ಹೌತಿ ಬಂಡುಕೋರರು ನಿಯಂತ್ರಿಸುತ್ತಿದೆ. 2015ರಲ್ಲಿ ಸೌದಿ ಸೇನೆ ಯೆಮನ್ ಪ್ರವೇಶಿಸಿ, ಹೌತಿಗಳ ವಿರುದ್ಧ ಹೋರಾಟ ಶುರು ಮಾಡಿತ್ತು. ಅದೇ ರೀತಿ ಹೌತಿ ಬಂಡುಕೋರರು ಕೂಡ ಸೌದಿ ಅರೇಬಿಯಾ ಮೇಲೆ ದಾಳಿ ನಡೆಸ್ತಾನೇ ಇದಾರೆ. ಅಂದಹಾಗೆ ಈ ಬಗ್ಗೆ ನಾವು ಸ್ಪೆಷಲ್ಲಾಗಿ ಒಂದು ವಿಡಿಯೋ ಮಾಡಿದ್ದೀವಿ.. ಅದ್ರ ಲಿಂಕ್ ಡಿಸ್ಕ್ರಿಪ್ಶನ್ ಬಾಕ್ಸ್​ನಲ್ಲಿದೆ. ನೀವು ನೋಡ್ಬೋದು..

-masthmagaa.com

Contact Us for Advertisement

Leave a Reply