ರಷ್ಯಾವನ್ನು ನಾವು ನಂಬೋದಿಲ್ಲ: ವೊಲೊಡಿಮಿರ್ ಝೆಲೆನ್​ಸ್ಕಿ

masthmagaa.com:

ಡಿ-ಎಸ್ಕಲೇಷನ್‌ ಮಾಡ್ತೀವಿ ಅಂತ ಹೇಳಿರೋ ರಷ್ಯಾದ ಮಾತುಗಳನ್ನ ನಾವು ನಂಬೋದಿಲ್ಲ, ನಮ್ಮ ಸೇನೆ ಡಾನ್‌ಬಾಸ್‌ ಪ್ರದೇಶವನ್ನ ರಕ್ಷಣೆ ಮಾಡೋಕೆ ಸನ್ನದ್ಧವಾಗಿದೆ ಅಂತ ಯುಕ್ರೇನ್‌ ಅಧ್ಯಕ್ಷ ಝೆಲನ್‌ಸ್ಕಿ ಹೇಳಿದ್ದಾರೆ. ಈ ಸಂಬಂಧ ದೇಶವನ್ನ ಉದ್ದೇಶಿಸಿ ಮಾತಾಡಿರೋ ಜೆಲನ್‌ಸ್ಕಿ, ನಾವು ಯಾರನ್ನೂ ನಂಬೋದಿಲ್ಲ, ಅವ್ರ ಒಂದು ಶಬ್ಧವನ್ನೂ ಕೂಡ ನಂಬೋದಿಲ್ಲ. ನಮ್ಮ ದೇಶದ ಒಂದೊಂದು ಇಂಚಿಗೂ ಹೋರಾಡ್ತೀವಿ ಅಂತ ಹೇಳಿದ್ದಾರೆ. ಜೊತೆಗೆ ಡಾನ್‌ಬಾಸ್‌ ಪ್ರಾಂತ್ಯದಲ್ಲಿ ರಷ್ಯಾ ಮತ್ತೆ ಹೊಸದಾಗಿ ದಾಳಿ ಮಾಡೋಕೆ ಸೇನೆ ಜಮಾವಣೆ ಮಾಡ್ತಿರೋದು ಕಂಡು ಬರ್ತಾ ಇದೆ. ನಾವು ಅದಕ್ಕೆ ತಯಾರಾಗ್ತಾ ಇದೀವಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply